ಕರ್ನಾಟಕಪ್ರಮುಖ ಸುದ್ದಿ

ನಮಗೆ ಅಧಿಕಾರ ದಾಹವಿದೆ ನಾವೇನು ಸನ್ಯಾಸಿಗಳಾ? ಸಿಎಂ ಸ್ಥಾನಕ್ಕೆ ಒಳಸಂಚು ಮಾಡಿ ಜಗಳವಾಡುತ್ತಿಲ್ಲ : ಡಿ.ಕೆ.ಶಿವಕುಮಾರ್ ಗೆ ಸಚಿವ ಈಶ್ವರಪ್ಪ ತಿರುಗೇಟು

ರಾಜ್ಯ(ಮಂತ್ರಾಲಯ),ನ.30 :- ನಮಗೆ ಅಧಿಕಾರದ ದಾಹವಿದೆ, ನಾವೇನು ಸನ್ಯಾಸಿಗಳಾ, ಅಧಿಕಾರವನ್ನು ಇಟ್ಟುಕೊಂಡು ರಾಷ್ಟ್ರೀಯ ವಿಚಾರಗಳಿಗೆ ಬೆಂಬಲ ನೀಡುತ್ತೇವೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ತರ ಸಿಎಂ ಸ್ಥಾನಕ್ಕೆ ಒಳಗೆ ಸಂಚು ಮಾಡಿ ಜಗಳವಾಡುತ್ತಿಲ್ಲ ಎಂದು ಸಚಿವ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಇಂದು ಬೆಳಿಗ್ಗೆ ಮಂತ್ರಾಲಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ನಾನು ಸ್ವಾಭಾವಿಕವಾಗಿ ಕೊಪ್ಪಳ, ಬೆಳಗಾವಿ, ರಾಯಚೂರು ಈ ಭಾಗದಲ್ಲಿ ಬರುವಂತ ಸಂದರ್ಭದಲ್ಲಿ ಮಂತ್ರಾಲಯಕ್ಕೆ ಬಂದು ರಾಯರ ದರ್ಶನ ಮಾಡುವುದು ಅಭ್ಯಾಸ, ಡಿ.12 ರಂದು ಬೆಂಗಳೂರಿನಲ್ಲಿ ಒಬಿಸಿ ಮೋರ್ಚಾ ಸಮಾವೇಶ ನಡೆಯುತ್ತಿದೆ. ಇದಕ್ಕೆ ರಾಜ್ಯಾದಾಂತ್ಯ ನಾನು ಮತ್ತು ನರೇಂದ್ರ ಬಾಬು ಸೇರಿದಂತೆ ಉಳಿದ ಎಲ್ಲ ನಾಯಕರು ರಾಜ್ಯದ ಪ್ರವಾಸ ಮಾಡುತ್ತಿದ್ದೇವೆ, ಇಂದು ಕೊಪ್ಪಳ, ಬಳ್ಳಾರಿ, ರಾಯಚೂರು ಈ ಮೂರು ಜಿಲ್ಲೆಯ ಸಮಾವೇಶಗಳನ್ನು ಮುಗಿಸಿಕೊಂಡು ಬಂದಿದ್ದೇವೆ, ಈಗ ರಾಯರ ದರ್ಶನವನ್ನು ಪಡೆದಿದ್ದೇವೆ. ನಾಳೆ ಗುಲ್ಬರ್ಗ ಕಡೆ ಹೋಗುತ್ತೇವೆ ಎಂದು ತಿಳಿಸಿದ್ದಾರೆ.
ಈಶ್ವರಪ್ಪ ನವರ ನಾಲಿಗೆ ಹತೋಟಿ ತಪ್ಪುತ್ತಿದೆ ಎಂದು ದಾವಣಗೆರೆಯಲ್ಲಿ ಎಚ್.ಎಂ ರೇವಣ್ಣ ಹೇಳಿರುವ ಮಾತಿಗೆ ಪ್ರತಿಕ್ರಿಯಿಸಿ, ನನ್ನ ನಾಲಿಗೆ ಯಾವಗಾಲು ಸ್ಪಷ್ಟವಾಗಿದೆ ಯಾವುದೇ ಕಾರಣಕ್ಕೂ ನಾಲಿಗೆ ಹರಿಬಿಡುವುದಿಲ್ಲ, ತಪ್ಪುಗಳನ್ನು ಮಾತ್ರ ನಾನು ನೇರವಾಗಿ ಹೇಳುತ್ತೇನೆ , ಅದನ್ನು ಅವರು ಹಾಗೆಂದು ತಿಳಿದುಕೊಂಡರೆ ಅದು ಅವರ ಹಣೆಬರಹ ನಾನು ಏನು ಮಾಡೋಕಾಗಲ್ಲ . ನನ್ನ ಚಿಂತನೆ, ನನ್ನ ಭಾಮನೆ ,ನನ್ನ ತೀರ್ಮಾನಕ್ಕೆ ಯಾರೂ ಅಡ್ಡ ಬರೋಕೆ ಆಗಲ್ಲ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯವರಿಗೆ ಅಧಿಕಾರದ ದಾಹವಿದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ ನಮಗೆ ಅಧಿಕಾರದ ದಾಹವಿದೆ, ನಾವೇನು ಸನ್ಯಾಸಿಗಳಾ, ಇವತ್ತಿನಿಂದ ಅಲ್ಲ ಎಷ್ಟು ವರ್ಷಗಳಿಂದ ಈ ಸಂಘಟನೆಯನ್ನು ಕಟ್ಟಿಕೊಂಡು ಬಂದಿದ್ದೇವೆ .ಈ ಅಧಿಕಾರವನ್ನು ಇಟ್ಟುಕೊಂಡು ರಾಷ್ಟ್ರೀಯ ವಿಚಾರಗಳಿಗೆ ಬೆಂಬಲ ಕೊಡುತ್ತೇವೆ. ಕಾಂಗ್ರೆಸ್ ನ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ತರ ಸಿಎಂ ಸ್ಥಾನಕ್ಕೆ ಒಳಗೆ ಸಂಚು ಮಾಡಿ ಜಗಳವಾಡುತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: