ಕರ್ನಾಟಕಪ್ರಮುಖ ಸುದ್ದಿ

ಸರ್ಕಾರದ ಮುಂದೆ ಲಾಕ್ ಡೌನ್ ಪ್ರಶ್ನೆ ಇಲ್ಲ : ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ

ರಾಜ್ಯ(ಬೆಂಗಳೂರು),ನ.30 :- ರಾಜ್ಯ ಸರ್ಕಾರದ ಮುಂದೆ ಲಾಕ್ ಡೌನ್ ಅನ್ನುವ ಪ್ರಶ್ನೆಯೇ ಇಲ್ಲ, ಜನರೇ ಜವಾಬ್ದಾರಿಯಿಂದ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಇಂದು ಮುಖ್ಯಮಂತ್ರಿಗಳ ನಿವಾಸದ ಮುಂದೆ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದ ಮುಂದೆ ಲಾಕ್ ಡೌನ್ ಅನ್ನುವ ಪ್ರಶ್ನೆಯೇ ಇಲ್ಲ , ಜನ ಜೀವನ ಯಾವರೀತಿ ನಡೆಯುತ್ತಿದೆ ಅದೇ ರೀತಿ ನಡೆಯ ಬೇಕು , ಆದರೆ ಜನರು ಎಲ್ಲಿ ಹೆಚ್ಚಾಗಿ ಸೇರುತ್ತಾರೆ ಅಲ್ಲಿ ಕಟ್ಟುನಿಟ್ಟಿನ ಕೋವಿಡ್ ಕ್ರಮವನ್ನು ಅನುಸರಿಸಬೇಕು , ಜನರನ್ನು ಸಭೆ ಮತ್ತು ಮತ್ತಿತರ ಕಾರ್ಯಕ್ರಮಗಳಿಗೆ ಸೇರಿಸುವ ಸಂಘ, ಸಂಸ್ಥೆಗಳು ಕೋವಿಡ್ ನಿಯಮಾನುಸಾರ ಕ್ರಮಗಳನ್ನು ವಹಿಸಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಸೂಚನೆಗಳನ್ನು ಹೊರಡಿಸಲಾಗಿದೆ ಎಂದರು. ಯಾವ ಸುಳ್ಳು ವಂದತಿಗಳ ಬಗ್ಗೆ ಗಮನ ಹರಿಸಬೇಡಿ ಎಂದು ಎಂದು ಎಚ್ಚರಿಸಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: