ಮೈಸೂರು

ಜಿಎಸ್ ಎಸ್ ಎಸ್ ನಲ್ಲಿ ಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ

ಮೈಸೂರು,ನ.30 :- ಗೀತಾ ಶಿಶು ಶಿಕ್ಷಣ ಸಂಸ್ಥೆಯ ವತಿಯಿಂದ ‘ಸರಸ್ವತಿ’ ಶೀರ್ಷಿಕೆಯಡಿಯಲ್ಲಿ ಜಿ.ಎಸ್.ಎಸ್.ಎಸ್ ನ ಸ್ಥಾಪಕರಾದ ಎಸ್, ಪಂಡಿತ್ ಅವರ ಸ್ಮರಣಾರ್ಥ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಇತ್ತೀಚೆಗೆ ಜಿ.ಎಸ್.ಎಸ್.ಎಸ್ ಮಹಿಳಾ ಇಂಜಿನಿಯರಿಂಗ್ ಕಾಲೇಜಿನ ಎಂ.ಗೋವಿಂದ ರಾವ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಟ್ಯರಾಣಿ ಶಾಂತಲ ಬಿರುದಾಂಕಿತೆ ಡಾ. ವಸುಂಧರ ದೊರೈಸ್ವಾಮಿ ‘ಜನನಿ’ ಆಧಾರಿತ ಭರತನಾಟ್ಯದ ಅಮೋಘ ನೃತ್ಯರೂಪಕವನ್ನು ಪ್ರದರ್ಶಿಸಿದರು. ನಂದ ಕುಮಾರ ಉನ್ನಿಕೃಷ್ಣ ರ ಹಾಡುಗಾರಿಕೆಯಲ್ಲಿ, ಸಂದೇಶ್ ಭಾರ್ಗವ್ ನಟುವಂಗ , ಹೆಚ್.ಎಲ್. ಶಿವಶಕಂರ ಮೃದಂಗ , ಕೃಷ್ಣಪ್ರಸಾದ್ ಕೊಳಲು ,ಪ್ರದೇಶಚಾರ್ಯ ವಯೋಲಿನ್ ನಲ್ಲಿ ಸಾಥ್ ನೀಡಿದರು.
ಟಿ.ಎಂ. ಕೃಷ್ಣ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೃದು ಮಧುರ ಹಾಡುಗಾರಿಕೆಯಿಂದ ಸಂಗೀತಪ್ರಿಯರನ್ನು ಸಂಗೀತ ಲೋಕದಲ್ಲಿ ತೇಲಿಸಿದರು. ಇವರ ಹಾಡುಗಾರಿಕೆಗೆ ಅಕ್ಕ್ರೈ ಸುಬ್ಬಲಕ್ಷ್ಮೀಯವರ ವಯೋಲಿನ್, ಎನ್.ಸಿ. ಭಾರಧ್ವಾಜ್ ಮೃದಂಗ, ಗಿರಿಧರ್ ಉಡುಪ ಘಟಂ ವಾದ್ಯದಲ್ಲಿ ಸಹಕರಿಸಿದರು. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: