ಮೈಸೂರು

ವಿಜಯ ವಿಠಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯ ಸಾಧನೆ

ಮೈಸೂರು,ನ.30:- ವಿಜಯ ವಿಠ್ಠಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಮೋಹಿತ್ ಹೆಚ್.ವಿ. ಇತ್ತೀಚೆಗೆ ನಡೆದ ಜೆ.ಇ.ಇ. ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ 1675ನೇ ರ್ಯಾಂಕನ್ನು ಗಳಿಸಿದ್ದಾರೆ.
ಇವರು ಚೆನ್ನೈನ ಐ.ಐ.ಟಿ.ಯಲ್ಲಿ ಬಯೋಲಾಜಿಕಲ್ ಇಂಜಿನಿಯರಿಂಗ್ ಕೋರ್ಸಿಗೆ ಪ್ರವೇಶ ಪಡೆದಿದ್ದಾರೆ. ಇವರು ಹುಣಸೂರಿನ ವಿಷ್ಣು ಹೆಚ್.ಎನ್ ಮತ್ತು ಮತ್ತು ಲಕ್ಷ್ಮಿ.ವಿ ಅವರ ಪುತ್ರ. ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಬೋಧಕ ಮತ್ತು ಬೋಧಕೇತರರು ಅಭಿನಂದಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: