ಮೈಸೂರು

ಮೇಜರ್ ಜನರಲ್ ಸಿಕೆ ಕರುಂಬಯ್ಯ ರಿಗೆ ಅಭಿನಂದನೆ

ಮೈಸೂರು,ನ.30:- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರಿನಲ್ಲಿರುವ ಕಾವೇರಿ ಸಭಾಂಗಣದಲ್ಲಿ ಇಂದು ಮೇಜರ್ ಜನರಲ್ ಸಿಕೆ ಕರುಂಬಯ್ಯ, ಎಸ್ಎಂ (ನಿವೃತ್ತ) ಇವರಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭ ಹಿರಿಯ ಅಧಿಕಾರಿಗಳು ಮತ್ತು ಗೌರವ ಅತಿಥಿಗಳಾಗಿ ಮೇಜರ್ ಜನರಲ್ ವೊಂಬಟ್ಕೆರೆ, ವಿಎಸ್ ಎಂ (ನಿವೃತ್ತ) ಸೇರಿದಂತೆ ಮೂರು ಸೇವೆಗಳ ಎಲ್ಲಾ ಶ್ರೇಣಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಿಸಲ್ದಾರ್ ಬಿ.ಎಂ.ಕಾವೇರಿಯಪ್ಪ ಅವರ ಪುತ್ರಿಯರಾದ ಲಲಿತಾಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಫ್ಲೈಯಿಂಗ್ ಆಫೀಸರ್ ಕೆಪಿ ಮುರಳೀಧರನ್ ಮತ್ತು ಬಿಎಂ ಮಟಲ್ಲಯ್ಯ ಅವರ ಸಹೋದರಿ, ಮಾಚಯ್ಯ ಮತ್ತಿತರರಿದ್ದರು. ಆಗಸ್ಟ್ ಕೂಟದಲ್ಲಿ ಡಿಫೆನ್ಸ್ ಆಫೀಸರ್‌ಗಳು, ಜೂನಿಯರ್ ಕಮಿಷನ್ಡ್ ಆಫೀಸರ್‌ಗಳು ಮತ್ತು ಎನ್‌ಸಿಸಿ ಗ್ರೂಪ್ ಕಮಾಂಡರ್ ಕರ್ನಲ್ ಆರ್‌ಆರ್ ಮೆನನ್, ಇತರ ಆಫೀಸರ್‌ ಗಳು , ಸೇರಿದಂತೆ ಇತರ ಶ್ರೇಣಿಗಳನ್ನು ಮೈಸೂರಿನಲ್ಲಿ ನಿಯೋಜಿಸಲಾಗಿತ್ತು. ಎನ್‌ಸಿಸಿ ಕೆಡೆಟ್‌ಗಳು ಮತ್ತು ಅಸೋಸಿಯೇಟ್ ಎನ್‌ಸಿಸಿ ಅಧಿಕಾರಿಗಳು ಭಾಗವಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: