ಕರ್ನಾಟಕಪ್ರಮುಖ ಸುದ್ದಿ

ಬಿಜೆಪಿ ಪಕ್ಷ ಸಮಗ್ರ ಅಭಿವೃದ್ಧಿ ಕೆಲಸ ಮಾಡುತ್ತಿದೆ : ಸಚಿವ ಶ್ರೀರಾಮುಲು

ರಾಜ್ಯ(ಬಳ್ಳಾರಿ),ನ.30 :- ಬಿಜೆಪಿ ಪಕ್ಷದಲ್ಲಿ ಯಾವುದೇ ಕಚ್ಚಾಟಗಳು ಇಲ್ಲ ಸಮಗ್ರವಾಗಿ ಅಭಿವೃದ್ಧಿಯನ್ನು ಮಾಡುವ ಕೆಲಸವನ್ನು ಮಾಡುತ್ತೇವೆ, ಕಾಂಗ್ರೆಸ್ ನ ಬಂಡಾಯ ಶೂರ ಮತ್ತು ಮೊಂಡಾಯ ಶೂರರು ನಾನು ಸಿಎಂ ಆಗಬೇಕು ಎಂದು ನಮ್ಮ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಗಳನ್ನು ಬಾಯಿಗೆ ಬಂದಹಾಗೇ ಬೈಯುತ್ತಿದ್ದಾರೆ ಎಂದು ಸಚಿವ ಶ್ರೀರಾಮು ಕಿಡಿಕಾರಿದ್ದಾರೆ.
ವಿಧಾನ ಪರಿಷತ್ ಚುನಾವಣೆಯ ಹಿನ್ನಲೆ ಇಂದು ಚಿತ್ರದುರ್ಗದಲ್ಲಿ ಸಚಿವ ಶ್ರೀರಾಮುಲು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದು. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾಣೆಯ ಮತ್ತು ನಾಯಕರ ವೈಯುಕ್ತಿಕ ಹೇಳಿಕೆಗಳ ಬಗ್ಗೆ ನಾನು ಮಾತನಾಡುವುದಿಲ್ಲ, ನಮ್ಮ ಪಕ್ಷದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಮತ್ತು ರಾಜ್ಯ ನಾಯಕರುಗಳ ಮಾತಿಗೆ ಬದ್ಧರಾಗಿ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿಯವರಿಗೆ ಆಡಳಿತ ಮಾಡಲು ಬರುವುದಿಲ್ಲ ಕೆಲವರು ಅಧಿಕಾರಕ್ಕಾಗಿ ಹೊಡೆದಾಡುತ್ತಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಅವರ ಮಾತಿಗೆ ಪ್ರತಿಕ್ರಿಯಿಸಿ, ನಮ್ಮ ಪಕ್ಷದಲ್ಲಿ ಯಾವುದೇ ಕಚ್ಚಾಟಗಳು ಇಲ್ಲ ಸಮಗ್ರವಾಗಿ ಅಭಿವೃದ್ಧಿಯನ್ನು ಮಾಡುವ ಕೆಲಸವನ್ನು ಮಾಡುತ್ತೇವೆ, ಕಾಂಗ್ರೆಸ್ ನ ಬಂಡಾಯ ಶೂರ ಮತ್ತು ಮೊಂಡಾಯ ಶೂರರು ನಾನು ಸಿಎಂ ಆಗಬೇಕು ಎಂದು ನಮ್ಮ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಗಳನ್ನು ಬಾಯಿಗೆ ಬಂದಾಹಾಗೇ ಬೈಯುತ್ತಿದ್ದಾರೆ ಅದಕ್ಕೆ ಜನರೇ ಸರಿಯಾದ ಉತ್ತರವನ್ನು ನೀಡುತ್ತಾರೆ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: