ಕರ್ನಾಟಕಪ್ರಮುಖ ಸುದ್ದಿ

ಡಿಸೆಂಬರ್ 1ರಿಂದ ಹೊಸ ಮಾರ್ಗ ಸೂಚಿ

ದೇಶ(ನವದೆಹಲಿ),ನ.30 :- ಡಿಸೆಂಬರ್ 1 ರಿಂದ ಹೊಸ ಮಾರ್ಗಸೂಚಿ ಅನ್ವ ಯವಾಗಲಿದೆ. ಕೊವಿಡ್ ರೂಪಾಂತರಿ ಒಮಿಕ್ರಾನ್ ಪೀಡಿತ ದೇಶಗಳಿಗೆ ಹೋಗುವ ಮತ್ತು ಬರುವ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಹೊರಡುವುದು ಅಥವಾ ಭಾರತಕ್ಕೆ ಆಗಮಿಸುವಾಗ ನಡೆಸಿದ ಆರ್.ಟಿ-ಪಿಸಿಆರ್ ಪರೀಕ್ಷೆಯ ಕಡ್ಡಾಯ ನಕಾರಾತ್ಮಕ ವರದಿಯ ಅಗತ್ಯವಿದೆ. ಇಲ್ಲದಿದ್ದರೆ ಅವರನ್ನು ಸರ್ಕಾರ ಗುರುತಿಸಿದ ಕ್ವಾರಂಟೆನ್ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ ಎಂದು ಹೇಳಲಾಗಿದೆ.
ಈ ಪರೀಕ್ಷೆಗಳಲ್ಲಿ ಧನಾತ್ಮಕವಾಗಿ ಕಂಡುಬಂದ ಪ್ರಯಾಣಿಕರಿಗೆ ಸಂಪೂರ್ಣ ಜೀನೋಮ್ ಸೀಕ್ವೆನ್ಸಿಂಗ್ ಗಾಗಿ ಅವರ ಮಾದರಿಗಳನ್ನು ತೆಗೆದುಕೊಳ್ಳವುದರ ಜೊತೆಗೆ ಕ್ಲಿನಿಕಲ್ ಮ್ಯಾನೇಜ್ ಮೆಂಟ್ ಪ್ರೋಟೋಕಾಲ್ ಪ್ರಕಾರ ಅವರನ್ನು ಪ್ರತ್ಯೇಕಿಸಲಾಗುತ್ತದೆ ಮತ್ತು ಚಿಕಿತ್ಸೆ ನೀಡಲಾಗುತ್ತದೆ. ನೆಗೆಟಿವ್ ಕಂಡು ಬಂದ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ನಿರ್ಗಮಿಸಬಹುದು ಆದರೆ 7 ದಿನಗಳವರೆಗೆ ಹೋಮ್ ಐಸೋಲೇಶನ್ ಒಳಗಾಗಬೇಕಾಗುತ್ತದೆ. ಭಾರತಕ್ಕೆ ಆಗಮಿಸಿದ 8 ನೇ ದಿನದಂದು ಪುನರಾವರ್ತಿತ ಪರೀಕ್ಷೆಯನ್ನು ನಡೆಸಬೇಕು , ನಂತರ 7 ದಿನಗಳ ಸ್ವಯಂ-ಮೇಲ್ವಿಚಾರಣೆಯಲ್ಲಿರಬೇಕು ಎಂದು ಮೂಲಗಳು ತಿಳಿಸಿವೆ. (
ಎಸ್.ಎಂ,ಎಸ್.ಎಚ್)

Leave a Reply

comments

Related Articles

error: