ಕರ್ನಾಟಕಪ್ರಮುಖ ಸುದ್ದಿ

ಜೆಡಿಎಸ್ ಬಿಟ್ಟು ಬೇರೆ ಪಕ್ಷ ಕ್ಕೆ ಹೋಗುವ ಮಾತೇ ಇಲ್ಲ : ಪುಟ್ಟರಾಜು

ರಾಜ್ಯ(ಮಂಡ್ಯ),ನ.30 :- ದೇವೇಗೌಡರು ಎಲ್ಲಿ ತನಕ ರಾಜಕಾರಣ ಮಾಡುತ್ತಾರೋ ಅಲ್ಲಿ ತನಕ ಜೆಡಿಎಸ್ ಪಕ್ಷ ಬಿಟ್ಟು ನಾನು ಬೇರೆ ಪಕ್ಷಕ್ಕೆ ಹೋಗುವ ಮಾತೇ ಇಲ್ಲ ಎಂದು ಮಾಜಿ ಸಂಸದ ಸಿ.ಎಸ್. ಪುಟ್ಟರಾಜು ಹೇಳಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷದ ಮಂಡ್ಯದ ಅಭ್ಯರ್ಥಿ ಅಪ್ಪಾಜಿಗೌಡ ಪರ ಪ್ರಚಾರದ ವೇಳೆ ಶಾಸಕ ಸಿ.ಎಸ್. ಪುಟ್ಟರಾಜು ಮಾತನಾಡಿ, ಬಹಳ ಜನ ವ್ಯಾಖ್ಯಾನ ಮಾಡುತ್ತಿದ್ದಾರೆ. ಪುಟ್ಟರಾಜು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಅಂತ , ಆದರೆ ನಾನು ಹೇಳುತ್ತಿದ್ದೇನೆ ನನಗೆ ರಾಜಕೀರದಲ್ಲಿ ಜನ್ಮ ಕೊಟ್ಟಿದ್ದು ದೇವೇಗೌಡರು , ನನ್ನ ರಾಜಕೀಯ ಬದುಕು ಹುಟ್ಟಿದ್ದು ಈ ಪಕ್ಷದಲ್ಲಿ ಅಂದ ಮೇಲೆ ನನ್ನ ರಾಜಕೀಯ ಅಂತ್ಯವು ಈ ಜೆಡಿಎಸ್ ಪಕ್ಷದಲ್ಲಿಯೇ. ದೇವೇಗೌಡರು ಎಲ್ಲಿ ತನಕ ರಾಜಕಾರಣ ಮಾಡುತ್ತಾರೋ ಅಲ್ಲಿ ತನಕ ನಾನು ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: