ಕರ್ನಾಟಕಪ್ರಮುಖ ಸುದ್ದಿ

ಮುಂಜಾಗ್ರತೆ ವಹಿಸಿ,ಕೋವಿಡ್ ಲಸಿಕೆ ಕಡ್ಡಾಯವಾಗಿ ಪಡೆಯುವಂತೆ ಸಚಿವ ಡಾ.ಸುಧಾಕರ್ ಮನವಿ

ರಾಜ್ಯ(ಬೆಂಗಳುರು),ನ.30 : – ಜನರು ಮುಂಜಾಗ್ರತೆಯನ್ನು ವಹಿಸಿ ಮತ್ತು ಕೊವಿಡ್ ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಿ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಜನರಲ್ಲಿ ಮನವಿಯನ್ನು ಮಾಡಿದ್ದಾರೆ.
ಕೊರೊನಾದ ರೂಪಂತರ ಒಮಿಕ್ರಾನ್ ಎಂಬ ವೈರಾಣುವನ್ನು ತಡೆಗಟ್ಟಲು ಇಂದು ಬೆಳಗ್ಗೆ ಆರೋಗ್ಯ ಇಲಾಖೆಯೊಂದಿಗೆ ಸಭೆಯನ್ನು ಆರೋಗ್ಯ ಸಚಿವ ಡಾ.ಕೆ. ಸುಧಾಕಾರ್ ನಡೆಸಿದ್ದು ನಂತರ ಮಾಧ್ಯಮದೊಡನೆ ಮಾತನಾಡಿ, ಜಿನೋಮಿಕ್ ಸೀಕ್ವೆನ್ಸ್ ಲ್ಯಾಬ್ ಗಳ ನೋಡಲ್ ಆಫೀಸರ್ ಡಾ.ರವಿ ನೇತೃತ್ವದಲ್ಲಿ 10 ಜನರ ತಂಡ ರಚನೆ ಮಾಡಿದ್ದೇವೆ ಎಂದು ಮಾಹಿತಿಯನ್ನು ನೀಡಿದ್ದಾರೆ.
ಒಮಿಕ್ರಾನ್ ಪ್ರಭೇದ ವೈರಾಣು ಹರಡುವ ಪ್ರಮಾಣ ಹೆಚ್ಚಿದ್ದು, ಅದರ ತೀವ್ರತೆ ಬಗ್ಗೆ ನಮಗೆ ಸ್ಪಷ್ಟವಾಗಿ ಮಾಹಿತಿ ದೊರತಿಲ್ಲ. ಹಾಗಾಗಿ ಜನರಲ್ಲಿ ನಾನು ಮನವಿ ಮಾಡುವುದು ಏನೆಂದರೆ , ಮುಂಜಾಗ್ರತೆಯನ್ನು ವಹಿಸಿ ಮತ್ತು ಕೊವೀಡ್ ಲಸಿಕೆಯನ್ನು ಪಡೆದುಕೊಳ್ಳಿ . ಯಾರು ಭಯ ಪಡುವ ಅಗತ್ಯವಿಲ್ಲ ನಾವು ಈ ವೈರಾಣುವನ್ನು ತಡೆಗಟ್ಟಲು ಎಲ್ಲ ರೀತಿಯ ಕ್ರಮಗಳನ್ನು ವಹಿಸಿದ್ದೇವೆ ಎಂದು ಹೇಳಿದ್ದಾರೆ.
ಇನ್ನೂ ಹೊರ ದೇಶದಿಂದ ಬರುತ್ತಿರುವವರಿಗೆ ನಿರ್ಬಂಧವನ್ನು ವಿಧಿಸಬೇಕು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟಿದ್ದಾರೆ ಮತ್ತು ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಪತ್ರವನ್ನು ಸಹ ಬರೆದಿದ್ದಾರೆಂದು ಹೇಳಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: