ಮೈಸೂರು

ವಾಕೊ ಕರ್ನಾಟಕ ಮಹಿಳಾ ಸಮಿತಿಯ ಅಧ್ಯಕ್ಷರಾಗಿ ​​ ತ್ರಿಷಿಕಾ ಕುಮಾರಿ ಒಡೆಯರ್ ನೇಮಕ

ಮೈಸೂರು,ಡಿ.1:- ವಾಕೊ (WAKO)   ಕರ್ನಾಟಕ ಮಹಿಳಾ ಸಮಿತಿಯ ಅಧ್ಯಕ್ಷರಾಗಿ ​​ರಾಜವಂಶಸ್ಥೆ  ತ್ರಿಷಿಕಾ ಕುಮಾರಿ ಒಡೆಯರ್ ನೇಮಕಗೊಂಡಿದ್ದಾರೆ.

ಕರ್ನಾಟಕ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ  ಪೂಜಾ ಹರ್ಷ ಮತ್ತು   ವಾಕೊ ಇಂಡಿಯಾ ಕೋಚಿಂಗ್ ಕಮಿಟಿಯ   ಹರ್ಷ ಶಂಕರ್ ಅವರು ಇತ್ತೀಚೆಗೆ ಮೈಸೂರಿನ ಅರಮನೆಯಲ್ಲಿ   ತ್ರಿಷಿಕಾ ಕುಮಾರಿ ಒಡೆಯರ್ ಅವರನ್ನು ಸನ್ಮಾನಿಸಿದರು.

ಕರ್ನಾಟಕ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಶನ್  ನ್ನು ಏಪ್ರಿಲ್ 5, 2021 ರಂದು ರಚಿಸಲಾಯಿತು. 18 ಜಿಲ್ಲೆಗಳು  ವಾಕೊ ಕರ್ನಾಟಕದ ಅಡಿಯಲ್ಲಿ ಸಂಯೋಜಿತವಾಗಿವೆ.

ಕರ್ನಾಟಕ ಕಿಕ್‌ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ​​  ವಾಕೊ ಇಂಡಿಯಾ ಕಿಕ್‌ ಬಾಕ್ಸಿಂಗ್ ಫೆಡರೇಶನ್‌ ನಿಂದ ಸಂಯೋಜಿತವಾಗಿದೆ, ವಿಶ್ವ ಕಿಕ್‌ ಬಾಕ್ಸಿಂಗ್ ಸಂಸ್ಥೆಗಳ ಒಕ್ಕೂಟದ ಸದಸ್ಯ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಭಾರತ ಸರ್ಕಾರ ಮತ್ತು ಎಸ್ ಐ ಎ ನಿಂದ ಗುರುತಿಸಲ್ಪಟ್ಟಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: