ಕರ್ನಾಟಕಪ್ರಮುಖ ಸುದ್ದಿಮೈಸೂರು

ಮೋಸ ಮಾಡಿ ಮತ ಪಡೆಯುವ ಅವಶ್ಯಕತೆ ನಮಗಿಲ್ಲ : ಸಚಿವ ಕೆ.ಎಸ್.ಈಶ್ವರಪ್ಪ

ಮೈಸೂರು,ಡಿ.1 :-  ವ್ಯವಸ್ಥಿತವಾಗಿ ಹೋಗುವ ಮೂಲಕ ಹಿಂದುಳಿದವರ ಮನಸ್ಸನ್ನು ಗೆಲ್ಲಲು ಸಾಧ್ಯ, ಮೋಸ ಮಾಡಿ ಮತ ಪಡೆಯುವ ಅವಶ್ಯಕತೆ ನಮಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಮೈಸೂರಿನಲ್ಲಿಂದು ನಡೆದ ಒಬಿಸಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ    ಕಾಂಗ್ರೆಸ್ ನವರು ಹಿಂದುಳಿದವರನ್ನು,ದಲಿತರನ್ನು ಮತ್ತು ಬಡವರನ್ನು  ಬಹಳ ವರ್ಷ ಮೋಸ ಮಾಡುವುದಕ್ಕೆ ಆಗುವುದಿಲ್ಲ , ಮೋಸ ಮಾಡುವುದಕ್ಕೂ ಒಂದು ಲಿಮಿಟ್ ಬೇಕು . ಅದರೆ ನಮ್ಮ ಪಕ್ಷ  ಉಳಿದ ಇನ್ನೂ ಒಂದೂವರೆ ವರ್ಷದಲ್ಲಿ ಹಿಂದುಳಿದವರಿಗೆ ಮತ್ತು ದಲಿತರಿಗೆ ಏನೂ ಬೇಕೋ ಅವೆಲ್ಲವನ್ನು ಮಾಡಲಿದೆ.  ಸ್ವಸಹಾಯ ಸಂಘದ ಹೆಣ್ಣು ಮಕ್ಕಳು  ಏನು ಕೇಳಿದರೂ ನಾವು ಮಾಡಲು ಸಿದ್ದವಾಗಿದ್ದೇವೆ. ಆದರೆ ಕಾಂಗ್ರೆಸ್ ನವರ ರೀತಿ ಬಿಸಿ ರಕ್ತದ ಹುಡುಗರನ್ನು ಕೆಲಸವಿಲ್ಲದೆ ನಿರೋದ್ಯಗಿಗಳಾಗಿ ಮಾಡುವುದಿಲ್ಲ  ಎಂದರು.

ನಮ್ಮ ಪಕ್ಷ ಸುಮ್ಮನೆ ಅಧಿಕಾರಕ್ಕೆ ಬಂದಿಲ್ಲ ನಮ್ಮ ಅವಧಿಯಲ್ಲಿ ಸರಿಯಾದ ಶಿಕ್ಷಣ, ಕೇಂದ್ರ ಸರ್ಕಾರದಿಂದ ವಿಶೇಷವಾದ ಸಾಲ ನೀಡಿ ಯುವಕರಿಗೆ ಉದ್ಯೋಗ ಮಾಡಲು ಪ್ರೋತ್ಸಾಹ ನೀಡಿದ್ದೇವೆ. ಅಲ್ಲದೆ ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಶಾಲೆಯನ್ನು ಬಿಡಿಸದೆ ಅವರನ್ನು ಶಾಲೆಗೆ ಕಳುಹಿಸಿ ನೋಡಿ ನಿಮ್ಮ ಮನೆಯ ನಾಗರೀಕತೆ ಸ್ವಾಭಾವಿಕವಾಗಿ ಹೆಚ್ಚುತ್ತದೆ  ಎಂದು ತಿಳಿಸಿದರು.

ಮುಂದಿನ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಇಬ್ಬರು ಪುರುಷ ಕಾರ್ಯಕರ್ತರು ಮತ್ತು ಓರ್ವ ಮಹಿಳೆ ಕಾರ್ಯಕರ್ತೆಯರನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ಹಿಂದುಳಿದವರ ವರ್ಗಕ್ಕೆ ಕೊಡುವ ಸೌಲಭ್ಯಗಳ ಬಗ್ಗೆ ತರಬೇತಿಯನ್ನು ನೀಡಿ ಅವರಿಂದ ಆ ಯೋಜನೆಗಳ ಬಗ್ಗೆ ಎಲ್ಲರಿಗೂ ತಿಳಿಯುವ ಹಾಗೇ ಮಾಡುತ್ತೇವೆ ಎಂದರು.

ಒಂದು ಮಂಡಲದಿಂದ ಹತ್ತು ಜನ ಪ್ರಾಮಾಣಿಕ ಕಾರ್ಯಕರ್ತರು ಯಾವ ಚುನಾವಣೆ ಬರಲಿ, ಏನೇ ಕಾರ್ಯಕ್ರಮ ಬಂದರೂ ಈ ಹತ್ತು ಮಂದಿ ಶ್ರಮ ಹಾಕಬೇಕು. ಸುಮ್ನೆ ಪಟ್ಟಿ ಮಾಡಬೇಡಿ.   ಒಂದು ಮಂಡಲದಿಂದ ಒಂದು ಹತ್ತು ಮಂದಿಯಿಂದ ಆಯ್ಕೆ ಮಾಡುವುದು ಕಷ್ಟನಾ ಎಂದು ಪ್ರಶ್ನಿಸಿದರು.   ಹಿಂದುಳಿದ ವರ್ಗದವರ ಸಮಾಜದ  ಮೂರರಿಂದ ಮೂರುವರೆ ಸಾವಿರ ಜನರನ್ನು   ಬೆಂಗಳೂರಿನ ಅರಮನೆ ಮೈದಾನದಲ್ಲಿ  ಸಮಾವೇಶ ನಡೆಯಲಿದೆ. ವ್ಯವಸ್ಥಿತವಾಗಿ ಹೋಗೋಣ. ಖಂಡಿತ ಹಿಂದುಳಿದವರ ಮನಸ್ಸನ್ನು ಗೆಲ್ಲಲು ಅವಕಾಶವಿದೆ. ಮೋಸ ಮಾಡಿ ಮತ ಪಡೆಯುವ ಅವಶ್ಯಕತೆ ಇಲ್ಲ. ಚುನಾವಣೆ ಬಂದಾಗ ಕಾಂಗ್ರೆಸ್ ನವರು ನೀನು ಈ ಜಾತಿ ಈ ಜಾತಿ ಅಂತ ಹೇಳಿ ಸಿಂಧಗಿನಲ್ಲಿ ಮೂವತ್ತೈದು ಸಾವಿರ ಜನ ಕೈಕೊಟ್ಟು 31ಸಾವಿರ ಜನ ಬಿಜೆಪಿಗೆ ಮತ ನೀಡಿದರು ಇದರಲ್ಲೇ ಗೊತ್ತಾಗುತ್ತದೆ ಮೋಸ ಮಾಡುವುದು ಯಾರು ಅಂತ  ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ದಲಿತರ ಉದ್ದಾರವಿಲ್ಲ , ದಲಿತರ ಮನೆಗೋದ್ರೆ ಕುಡಿಯಲು ನೀರು ಸಹ ಸಿಗುತ್ತಿರಲಿಲ್ಲ. 70ವರ್ಷ ಕಾಂಗ್ರೆಸ್ ಏನು ಮಾಡಿತು? ಜಲಜೀವನ್ ಮಿಷನ್ ಮನೆಮನೆಗೆ ಗಂಗೆ. ಯಾವ ಮನೆಗೆ ಕುಡಿಯಲು ನೀರಿಲ್ಲವೋ ಆ ಮನೆಗೆ ನಲ್ಲಿಯ ಮೂಲಕ ನೀರು. 70ವರ್ಷಕ್ಕೆ 2ಕೋಟಿ ಮನೆಗೆ  ನೀರು ಕೊಟ್ಟವರು ಕಾಂಗ್ರೆಸ್ ನವರು, 7ವರ್ಷದಲ್ಲಿ 7ಕೋಟಿ ಮನೆಗಳಿಗೆ ನೀರಿನ ಸಂಪರ್ಕ ಕೊಟ್ಟವರು ಮೋದಿ ಎಂದರಲ್ಲದೇ, ಪ್ರತಿಮನೆಗೂ ನಲ್ಲಿ ನೀರನ್ನು ನೀಡಲು ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

ಮೈಸೂರು, ಮಂಡ್ಯ,ಚಾಮರಾಜನಗರ,ಕೊಡಗು ಮತ್ತು ಹಾಸನ ಜಿಲ್ಲೆಯ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಂ)

 

Leave a Reply

comments

Related Articles

error: