ಕರ್ನಾಟಕಪ್ರಮುಖ ಸುದ್ದಿ

ಜೆಡಿಎಸ್ ಮತ ಬೇಡ ಎಂದಿರುವ ಕಾಂಗ್ರೆಸ್ ಮನೆ ಬಾಗಿಲಿಗೆ ನಾವು ಹೋಗಲ್ಲ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ರಾಜ್ಯ(ರಾಮನಗರ),ಡಿ.1 :- ಜೆಡಿಎಸ್ ನವರ ಮತಗಳು ನಮಗೆ ಬೇಡ ಎಂದು ನೇರವಾಗಿ ಹೇಳಿರುವಾಗ, ಕಾಂಗ್ರೆಸ್ ನವರ ಮನೆಯ ಬಾಗಿಲಿಗೆ ನಾನು ಹೋಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ರಾಮನಗರದಲ್ಲಿ ವಿಧಾನಪರಿಷತ್ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡುವಾಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಧ್ಯಮದೊಂದಿಗೆ ಮಾತನಾಡಿ, ಪ್ರಧಾನಿ ಮತ್ತು. ಹೆಚ್.ಡಿ.ದೇವೇಗೌಡರ ಭೇಟಿಯ ಬಗ್ಗೆ ಇರುವ ಊಹಾಪೋಹಗಳ ಬಗ್ಗೆ ಸ್ಪಷ್ಟನೆ ನೀಡಿದ್ದು,
ಪ್ರಧಾನ ಮಂತ್ರಿ ಮೋದಿ ಮತ್ತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಭೇಟಿ ಮಾಡಿರುವುದು ಹೊಸದೆನಲ್ಲ,ನನಗೆ ಗೊತ್ತಿರುವ ಮಾಹಿತಿ ಪ್ರಕಾರ ನರೇಂದ್ರ ಮೋದಿಯವರು ಹೆಚ್.ಡಿ.ದೇವೇಗೌಡರಿಗೆ ವಿಶೇಷವಾದ ಗೌರವವನ್ನು ಕೊಡುತ್ತಾರೆ, ನಾನು ಮುಖ್ಯಮಂತ್ರಿಯಾದಾಗಲೂ ಪ್ರಧಾನಿಗಳನ್ನು ಅನೇಕ ಭಾರಿ ಭೇಟಿ ಮಾಡಿದ್ದಾಗ ನೋಡಿದ್ದೇನೆ, ಹಾಸನದಲ್ಲಿ ಐಐಟಿ ಯನ್ನು ಸ್ಥಾಪಿಸ ಬೇಕು ಎನ್ನುವ ನಿಟ್ಟಿನಲ್ಲಿ ಚರ್ಚೆ ಮಾಡುವ ಸಲುವಾಗಿ ಹೋಗಿದ್ದಾರೆ ಎಂಬ ಮಾಹಿತಿ ಇದೆ ಅಷ್ಟೆ. ಬಹುಶಃ ಅದರ ಮಧ್ಯದಲ್ಲಿ ಈ ಚುನಾವಣೆಯ ಚರ್ಚೆಯು ಆಗಿರಬಹುದು ಎಂದು ಹೇಳಿದ್ದಾರೆ.
ಯಡಿಯೂರಪ್ಪನವರು ಜನರ ಸಮ್ಮುಖ ಮನವಿ ಮಾಡಿದ್ದಾರೆ, ಎಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಲ್ಲ ಆ ಕ್ಷೇತ್ರದಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಿ ಎಂದು ಮನವಿ ಮಾಡಿದ್ದಾರೆ. ಕಾಂಗ್ರೆಸ್ ನವರು ನಮಗೆ ಜೆಡಿಎಸ್ ನವರ ಮತದ ಅವಶ್ಯಕತೆ ಇಲ್ಲ ನಮಗೆ ಅವರೊಂದಿಗೆ ಹೊಂದಾಣಿಕೆ ಇಲ್ಲ ಎಂದು ಕಾಂಗ್ರೆಸ್ ನಾಯಕರು ನೇರವಾಗಿ ಹೇಳಿದ್ದಾರೆ. ಆದ್ದರಿಂದ ಕರೆಯದೆ ಇರುವವರ ಮನೆ ಬಾಗಿಲಿಗೆ ಹೋಗುವುದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯವರು ಒಂದು ಮನವಿ ಮಾಡಿದ್ದಾರೆ ಮನವಿಯ ಹಿನ್ನಲೆಯಲ್ಲಿ ನಾವೇನು ತೀರ್ಮಾನ ಮಾಡಬೇಕೋ ನೋಡೊಣ ಎಂದು ಹೇಳಿದ್ದಾರೆ.
ನಮ್ಮ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರು ಬಯಸಿದರೆ ನಾನು ಮತ್ತೆ ಚುನಾವಣೆಯಲ್ಲಿ ಸ್ಪರ್ಧೀಸುತ್ತೇನೆ ಎಂದು ಮಂಡ್ಯದಲ್ಲಿ ಪ್ರಚಾರ ಮಾಡುವ ವೇಳೆ ನಿಖಿಲ್ ಕುಮಾರ್ ಸ್ವಾಮಿಯ ಹೇಳಿಕೆಗೆ ಪ್ರತಿಕ್ರಿಯಿಸಿ , ಅವರು ಹೇಳಿರುವುದು ಇನ್ನೂ ಎರಡು ವರ್ಷಗಳ ಮಾತು ಆಗ ಅದನ್ನು ಚರ್ಚೆ ಮಾಡೋಣ ಎಂದು ಹೇಳಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: