ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಸ್ಯಾಂಡಲ್ ವುಡ್ ನಟಿ ಸುಧಾರಣಿಗೆ ಗೌರವ ಡಾಕ್ಟರೇಟ್

ರಾಜ್ಯ(ಬೆಂಗಳೂರು),ಡಿ.1 :- ಸ್ಯಾಂಡಲ್ ವುಡ್ ಎವರ್ ಗ್ರೀನ್ ನಟಿ ಸುಧಾರಣಿಗೆ ಗೌರವ ಡಾಕ್ಟರೇಟ್ ನೀಡಲಾಗಿದ್ದು. ಈ ಬಗ್ಗೆ ಸುಧಾರಣಿ ಇನ್ ಸ್ಟಾಗ್ರಾಂನಲ್ಲಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.
ಸ್ಯಾಂಡಲ್ ವುಡ್ ಎವರ್ ಗ್ರೀನ್ ಹೀರೋಯಿನ್ ಎಂದೇ ಮನೆಮಾತಗಿರುವ ನಟಿ ಸುಧಾರಾಣಿ , ಬಾಲ ನಟಿಯಾಗಿ ತಮ್ಮ ಸಿನಿ ಜರ್ನಿಯನ್ನು ಪ್ರಾರಂಭಿಸಿದ್ದರು.
ತನ್ನ 12 ನೇ ವಯಸ್ಸಿನಲ್ಲಿ ನಾಯಕಿಯಾಗಿ ಶಿವರಾಜ್ ಕುಮಾರ್ ಜೊತೆ ಬೆಳ್ಳಿತೆರೆ ಮೇಲೆ ಮಿಂಚಿದ್ದರು. ಈಗ ಸುಧಾರಣಿ ಸಿನಿರಂಗದಲ್ಲಿ 35 ವರ್ಷಗಳನ್ನು ಪೂರೈಸಿದ್ದು. ಇಂಡಿಯನ್ ಎಂಪೈರ್ ವಿಶ್ವವಿದ್ಯಾನಿಲಯ ಸಹಯೋಗದೊಂದಿಗೆ ಯೂನಿವರ್ಸಲ್ ಡೆವಲಪ್ ಮೆಂಟ್ ಕೌನ್ಸಿಲ್ ನಿಂದ ಸುಧಾರಾಣಿಯವರಿಗೆ ಕಲಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಗೌರವ ಡಾಕ್ಟರೇಟ್ ನೀಡಲಾಗಿದೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: