ದೇಶಪ್ರಮುಖ ಸುದ್ದಿಮನರಂಜನೆ

ಕಮಲ ಹಾಸನ್ ಆರೋಗ್ಯದಲ್ಲಿ ಸುಧಾರಣೆ : ಡಿಸೆಂಬರ್ 3ರವ ರೆಗೆ ಐಸೋಲೇಷನ್ ನಲ್ಲಿ

ದೇಶ(ಚೆನ್ನೈ),ಡಿ.1 : -ಕೊರೊನಾ ಸೋಂಕಿಗೆ ತುತ್ತಾಗಿದ್ದ ಖ್ಯಾತ ನಟ ಕಮಲ್ ಹಾಸನ್ ಅವರು ಗುಣಮುಖರಾಗಿದ್ದು, ವೈದ್ಯರ ಸಲಹೆಯ ಮೇರೆಗೆ ಐಸೋಲೇಷನ್ ನಲ್ಲಿದ್ದಾರೆ.

ಕಮಲ್ ಹಾಸನ ಅವರು ನ.22 ರಂದು ಅಮೇರಿಕದಿಂದ ವಾಪಸ್ಸಾಗಿದ್ದರು. ಏರ್ ಪೋರ್ಟ್ ನಲ್ಲಿ ಕೊರೊನಾ ಪರೀಕ್ಷೆ ನಡೆಸಿದಾಗ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಅಂದೇ ಚೆನ್ನೈನ ಶ್ರೀ ರಾಮಚಂದ್ರ ಮೆಡಿಕಲ್ ಸೆಂಟರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈಗ ಅವರು ಕೊರೊನಾದಿಂದ ಪೂರ್ಣವಾಗಿ ಗುಣಮುಖರಾಗಿದ್ದಾರೆ. ಈ ಕುರಿತು ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.  ವೈದ್ಯರ ಸಲಹೆಯ ಮೇರೆಗೆ ಡಿ.3 ಅವರೆಗೆ ಐಸೋಲೇಷನ್ ನಲ್ಲಿ ಇರಲಿದ್ದಾರೆ, ಆ ಬಳಿಕ ಅವರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಭಾಗವಹಿಸಬಹುದು ಎಂದು ತಿಳಿಸಿದೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: