ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಕನ್ನಡ ಚಲನಚಿತ್ರರಂಗ ಪ್ರತಿಭೆಗಳನ್ನ ಸದಾ ಕೈ ಬೀಸಿ ಕರೆಯುತ್ತದೆ : ನಿರ್ಮಾಪಕ ರಾಕ್ ಲೈನ್ ವೆಂಕಟೇಶ್

ರಾಜ್ಯ(ಮಂಡ್ಯ). ಡಿ.2 :- ಕನ್ನಡ ಚಲನಚಿತ್ರರಂಗ ಪ್ರತಿಭೆಗಳನ್ನು ಸದಾ ಕೈ ಬೀಸಿ ಕರೆಯುತ್ತದೆ, ಈ ನಿಟ್ಟಿನಲ್ಲಿ ಈ ಚಲನಚಿತ್ರ ನಿರ್ಮಾಣ ತರಬೇತಿ ಕಾರ್ಯಾಗಾರ ನಿಮ್ಮೆಲ್ಲರಿಗೂ ಸ್ಪೂರ್ತಿಯನ್ನು ನೀಡಿದೆ ಎಂದು ನಟ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೇಳಿದರು.

ನಗರದ ಕರ್ನಾಟಕ ಸಂಘದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಹಭಾಗಿತ್ವದಲ್ಲಿ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಚಲನಚಿತ್ರ ನಿರ್ಮಾಣ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ತರಬೇತಿ ಕಾರ್ಯಾಗಾರಕ್ಕೆ 500 ಅರ್ಜಿಗಳು ಬಂದು ಅದರಲ್ಲಿ 40 ಜನ ಆಯ್ಕೆಯಾಗಿ ತರಬೇತಿಯನ್ನು ಪಡೆದಿದ್ದೀರಾ, ಆದ್ದರಿಂದ ಕನ್ನಡ ಚಿತ್ರರಂಗಕ್ಕೆ ಸಂಖ್ಯೆ ಮುಖ್ಯ ಅಲ್ಲ, ಪತ್ರಿಭೆ ಮುಖ್ಯ, ಆ ನಿಟ್ಟಿನಲ್ಲಿ ಪ್ರತಿಭೆಗಳನ್ನು ಆರಿಸಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಹಳೆಯ ಕಾಲದ ಕನ್ನಡ ಚಲನಚಿತ್ರದ ಬಗ್ಗೆ ಯಾರಾದರೂ ಹೇಳಿದರೇ ದಯವಿಟ್ಟು ಕೇಳಿ, ಆ ಕಾಲ ಒಂದು ಸುವರ್ಣ ಕಾಲ ಎಂದು ಹೇಳಿದರು.

ರಾಜಕುಮಾರ್ ,ವಿಷ್ಣುವರ್ಧನ್, ಅಂಬರೀಶ್ ಅವರ ಸೂಟಿಂಗ್ ನೋಡುವ ಭಾಗ್ಯ ಸಿಕ್ಕಿದರೇ ಸಾಕು ಎನ್ನುತ್ತಿದ್ದೆ, ಆದರೇ ಅವರ ಜೊತೆ ಎಲ್ಲಾ ಸುಖ ದುಃಖದಲ್ಲಿ ಭಾಗಿಯಾಗುವ ಸೌಭಾಗ್ಯ ಸಿಕ್ಕಿತು ಅದಕ್ಕೆ ನಾನಾ ಸದಾ ಚಿರ ಋಣಿ ಎಂದರು.

ಶಿಬಿರಾರ್ಥಿಗಳ ಕಿರುಚಿತ್ರಗಳನ್ನು ವೀಕ್ಷಿಸಿ ನಿಮ್ಮ ಎಲ್ಲಾ ಕಿರುಚಿತ್ರದಲ್ಲಿ ಅತ್ಯುತ್ತಮವಾಗಿ ನಟಿಸಿದ್ದೀರಿ, ಎಲ್ಲಾ ಚಿತ್ರಗಳಲ್ಲೂ ಬರುವ ಪಾತ್ರಗಳಿಗೆ ಜೀವ ತುಂಬಿದ್ದಾರೆ ಎಂದು ಕಲಾವಿದರಿಗೆ ಪ್ರಶಂಶೆ ವ್ಯಕ್ತಪಡಿಸಿದರು.

ಪ್ರತಿಯೊಬ್ಬ ಕಲಾವಿದನಿಗೂ ತಾಳ್ಮೆ ಮುಖ್ಯ, ಆ ನಿಟ್ಟಿನಲ್ಲಿ ಉತ್ತಮ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಬೆಳೆಯಿರಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ, ಹಾಗೂ ಟ್ಯಾಬ್ ಗಳನ್ನು ವಿತರಿಸಲಾಯಿತು, ಶಿಬಿರಾರ್ಥಿಗಳು ನಿರ್ಮಿಸಿದ ಮಮಕಾರ, ಅನಾಥ, ಸ್ನೇಹಜೀವಿ, ಸ್ಪೂರ್ತಿ ಕಿರುಚಿತ್ರಗಳು ಪ್ರದರ್ಶನಗೊಂಡವು.

ಕಾರ್ಯಕ್ರಮದಲ್ಲಿ ಸಿನಿಮಾಟೋಗ್ರಾಫರ್ ಆರ್.ಮಂಜುನಾಥ್, ಶಿಬಿರದ ಸಂಚಾಲಕರಾದ ಉಮೇಶ್ ನಾಯಕ್ , ಅನನ್ಯ ಸಂಸ್ಥೆಯ ರಾಜಶೇಖರ್, ಚಲನಚಿತ್ರ ಅಕಾಡೆಮಿ ರಿಜಿಸ್ಟಾರ್ ಹಿಮಂತರಾಜು ಹಾಗೂ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: