ಮೈಸೂರು

ಪತ್ನಿಯನ್ನು ಕೊಲೆಗೈದ ಪತಿ : ತಡೆಯಲು ಹೋದವರ ಮೇಲೂ ಹಲ್ಲೆ ; ಬಂಧನ

ಮೈಸೂರು,ಡಿ.2:- ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ ಪತಿಮಹಾಶಯನೋರ್ವ ತಡೆಯಲು ಹೋದವರ ಮೇಲೂ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ನಂಜನಗೂಡು ತಾಲೂಕಿನ ನವಿಲೂರು ಗ್ರಾಮದಲ್ಲಿ ನಡೆದಿದೆ.

ಈರಯ್ಯ ಪತ್ನಿಯನ್ನು ಕೊಲೆಗೈದ ಆರೋಪಿಯಾಗಿದ್ದಾನೆ. ಇದರಿಂದ ಎರಡನೇ ಪತ್ನಿ ನಿಂಗಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಇದೇ ವೇಳೆ ನಿಂಗಮ್ಮ ತಂದೆ, ತಾಯಿ ಮೇಲೆ ಕೂಡ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಇದರಿಂದ ಸಾವು ಬದುಕಿನ ನಡುವೆ ವೃದ್ಧ ದಂಪತಿಗಳು ಹೋರಾಟ ಮಾಡುತ್ತಿದ್ದಾರೆ.

ಇದಲ್ಲದೆ ಈರಯ್ಯನಿಂದ ಹಲ್ಲೆಗೊಳಗಾದ ಮತ್ತಿಬ್ಬರ ಸ್ಥಿತಿಯೂ ಗಂಭೀರವಾಗಿದೆ. ಪತ್ನಿಯ ಅನೈತಿಕ ಸಂಬಂಧ ಹಲ್ಲೆಗೆ ಕಾರಣ ಎನ್ನಲಾಗಿದೆ‌. ಮೊದಲ ಪತ್ನಿಯನ್ನು ಕೊಂದು ಸೆರೆ ವಾಸ ಅನುಭವಿಸಿದ್ದ ಈರಯ್ಯ ಜೈಲಿನಿಂದ ಹೊರ ಬಂದ ಬಳಿಕ ನಿಂಗಮ್ಮನನ್ನು ಮದುವೆ ಆಗಿದ್ದ. ಈಗ ಎರಡನೇ ಪತ್ನಿಯನ್ನೂ ಈರಯ್ಯ ಕೊಲೆ ಮಾಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಈರಯ್ಯನನ್ನು ಬಂಧಿಸಿದ್ದಾರೆ.
ಗಾಯಾಳುಗಳಿಗೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: