ಮೈಸೂರು

ಡಿ.3-4: ನೀರು ಸರಬರಾಜಿನಲ್ಲಿ ವ್ಯತ್ಯಯ

ಮೈಸೂರು, ಡಿ.2:- ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಹೊಂಗಳ್ಳಿ 2 ಹಾಗೂ 3 ನೇ ಯಂತ್ರಾಗಾರಕ್ಕೆ ವಿದ್ಯುತ್ ಸರಬರಾಜು ವ್ಯತ್ಯಯವಾಗುವ ಹಿನ್ನಲೆಯಲ್ಲಿ ಡಿಸೆಂಬರ್ 3 ಮತ್ತು 4 ರಂದು ಮೈಸೂರು ನಗರದ ಬಹುತೇಕ ಭಾಗಗಳಿಗೆ ನೀರು ಸರಬರಾಜು ವ್ಯತ್ಯಯವಾಗಲಿದೆ.ವಾಣಿವಿಲಾಸ ನೀರು ಸರಬರಾಜು ಕೇಂದ್ರದ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೀರು ಸರಬರಾಜು ವ್ಯತ್ಯಯವಾಗುವ ಬಡಾವಣೆಗಳ ವಿವರ ಹೀಗಿವೆ…ವಾರ್ಡ್ ನಂ1 ರಿಂದ 7,ವಾರ್ಡ್ ನಂ 20,23,28 ವಾರ್ಡ್ ನಂ 42 ರಿಂದ 45 ವಾರ್ಡ್ ನಂ 47 ಕ್ಕೆ ಸಂಬಂಧಿಸಿದಂತೆ ಹೆಬ್ಬಾಳ್, ಕುಂಬಾರಕೊಪ್ಪಲು, ಮಂಚೇಗೌಡನ ಕೊಪ್ಪಲು, ಕೆ.ಜಿ.ಕೊಪ್ಪಲು,ಮೆಟ ಗಳ್ಳಿ,ಲೋಕನಾಯಕ ನಗರ,ಬೃಂದಾವನ ಬಡಾವಣೆ,ಒಂಟಿಕೊಪ್ಪಲು,ಪಡುವರಾಹಳ್ಳಿ,ವಿನಯಕನಗರ,ಮಂಡಿಮೊಹಲ್ಲ,ಲಷ್ಕರ್ ಮೊಹಲ್ಲಾ,ಶಾರದಾದೇವಿ ನಗರ,ಸರಸ್ವತಿಪುರಂ,ಬೋಗಾದಿ,ವಿಜಯನಗರ 3 ಹಾಗೂ 2 ನೇ ಹಂತ,ಗೋಕುಲಂ 1,2,3 ನೇ ಹಂತ,ಆರ್.ಎಂ.ಪಿ,ಬಿಐಎಂಎಲ್,ಯಾದವಗಿರಿ,ಬನ್ನಿಮಂಟಪ,ಎಬಿಸಿ ಲೇಔಟ್,ಈರನಗೆರೆ,ಸಿದ್ದಿಖಿ ನಗರ,ಶಿವರಾತ್ರೀಶ್ವರ ನಗರ,ತಿಲಕ್ ನಗರ,ಬಡೇಮಕಾನ್,ಹಲೀಂ ನಗರ,ದೇವರಾಜ ಮೊಹಲ್ಲಾ,ಭಾಗಶಃ ಎನ್.ಆರ್.ಮೊಹಲ್ಲಾ,ನಜರಬಾದ್,ವಿದ್ಯಾರಣ್ಯಪುರಂ,ಕೃಷ್ಣಮೂರ್ತಿಪುರಂ,ಜನತಾನಗರ,ಕೆ.ಹೆಚ್.ಬಿ.ಕಾಲೋನಿ,ಹೂಟಗಳ್ಳಿ ಹಾಗೂ ಇತರ ಪ್ರದೇಶಗಳಲ್ಲಿ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: