ಮೈಸೂರು

ಆನ್ ಲೈನ್ ಮಟ್ಕಾ ದಂಧೆಯಲ್ಲಿ ತೊಡಗಿದ್ದ ಇಬ್ಬರು ವ್ಯಕ್ತಿಗಳ ಬಂಧನ

ಮೈಸೂರು,ಡಿ.2:-  ಆನ್‌ ಲೈನ್ ಮಟ್ಕಾ ದಂಧೆಯಲ್ಲಿ ತೊಡಗಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಎರಡು ಮೊಬೈಲ್ ಮತ್ತು 25,000   ರೂ. ನಗದು ಹಣ ವಶ ಪಡಿಸಿಕೊಂಡಿದ್ದಾರೆ.

21.11.2021 ರಂದು ಮಂಡಿ ಪೊಲೀಸ್ ಠಾಣಾ ಸರಹದ್ದು , ಬಿ.ಇ.ಓ. ಕಛೇರಿಯ ಹತ್ತಿರ ಆನ್‌ಲೈನ್‌ ಮಟ್ಕಾ ದಂಧೆಯಲ್ಲಿ ತೊಡಗಿದ್ದ ಓರ್ವ ವ್ಯಕ್ತಿ  ಮತ್ತು   26.11.2021 ರಂದು ಲಷ್ಕರ್ ಪೊಲೀಸ್ ಠಾಣಾ ಸರಹದ್ದು , ಪ್ರಭಾ ಟಾಕೀಸ್ ಮುಂಭಾಗ ಆನ್‌ಲೈನ್‌ ಮಟ್ಕಾ ದಂಧೆಯಲ್ಲಿ ತೊಡಗಿದ್ದ ಮತ್ತೋರ್ವ ವ್ಯಕ್ತಿಯನ್ನು ದಸ್ತಗಿರಿ ಮಾಡಿದ್ದಾರೆ. ಬಂಧಿತರಿಂದ  ಒಟ್ಟು 25,000  ರೂ.ಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸುತ್ತಿದ್ದ 2 ಮೊಬೈಲ್ ಫೋನ್‌ ಗಳನ್ನು ವಶಪಡಿಸಿಕೊಂಡಿದ್ದಾರೆ , ಈ ಬಗ್ಗೆ ಮಂಡಿ ಪೊಲೀಸ್ ಠಾಣೆ ಹಾಗೂ ಲಷ್ಕರ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ .

ಈ ದಾಳಿ ಕಾರ್ಯವನ್ನು ಡಿಸಿಪಿ   ಗೀತಪ್ರಸನ್ನ ಅವರ ಮಾರ್ಗದರ್ಶನದಲ್ಲಿ ಸಿಸಿಬಿಯ ಎ.ಸಿ.ಪಿ ಸಿ. ಕೆ ಅಶ್ವತ್ಥ ನಾರಾಯಣ ಅವರ ನೇತೃತ್ವದಲ್ಲಿ ಸಿ.ಸಿ.ಬಿಯ ಸಂಘಟಿತ ಅಪರಾಧ ಮತ್ತು ರೌಡಿ ಪ್ರತಿಬಂಧಕ ದಳದ ಪೊಲೀಸ್ ನಿರೀಕ್ಷಕರಾದ ಎ . ಮಲ್ಲೇಶ್ , ಎ.ಎಸ್.ಐ ರಾಜು   ಸಿಬ್ಬಂದಿಯವರುಗಳಾದ ರಾಧೇಶ್ , ಜನಾರ್ಧನರಾವ್ , ಡಿ.ಶ್ರೀನಿವಾಸ್‌ಪ್ರಸಾದ್ , ಜೋಸೆಫ್ ನೊರೋನ್ಹ , ಪುರುಷೋತ್ತಮ್ , ರಘು , ಸುನೀಲ್ , ಅರುಣ್‌ಕುಮಾರ್ , ಎನ್.ಜಿ , ಶ್ರೀನಿವಾಸ್ , ಮಮತ  ಅವರುಗಳು ನಡೆಸಿರುತ್ತಾರೆ . ಈ ದಾಳಿ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ. ಚಂದ್ರಗುಪ್ತ   ಪ್ರಶಂಸಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: