ಮೈಸೂರು

ಮೈಸೂರು ಜಿಲ್ಲೆಯಲ್ಲಿ 47ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ

ಮೈಸೂರು,ಡಿ.2 : – ಮೈಸೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಬುಧವಾರ 47 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 15 ಮಂದಿ ಗುಣಮುಖರಾಗಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಇಲ್ಲಿಯವರೆಗೆ 1,79,818 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 1,77,109 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 279 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 2,430 ಮಂದಿ ಸಾವನ್ನಪ್ಪಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ 47 ಸೇರಿದಂತೆ ರಾಜ್ಯದಲ್ಲಿ ಹಾಸನ 13, ಮಂಡ್ಯ 6, ಕೊಡಗು 9, ಚಾಮರಾಜನಗರ 9, ಬಳ್ಳಾರಿ, ಕೋಲಾರ, ಬೆಳಗಾವಿ, ಸೇರಿದಂತೆ ತಲಾ 2, ಬೆಂಗಳೂರು ಗ್ರಾಮಾಂತರ 3, ಚಿತ್ರದುರ್ಗ 4, ದಕ್ಷಿಣ ಕನ್ನಡ 13, ಧಾರವಾಡ 10, ಗದಗ, ಕಲುಬುರಗಿ, ರಾಯಚೂರು, ಚಿಕ್ಕಮಗಳೂರು, ರಾಮನಗರ ಜಿಲ್ಲೆ ಸೇರಿದಂತೆ ತಲಾ 1, ಶಿವಮೊಗ್ಗ 13, ತುಮಕೂರು 6, ಉಡುಪಿ 10, ಉತ್ತರ ಕನ್ನಡ 3 ಸೇರಿದಂತೆ ರಾಜ್ಯದಲ್ಲಿ 322 ಪ್ರಕರಣಗಳು ಕಾಣಿಸಿಕೊಂಡಿದ್ದು, 162 ಮಂದಿ ಗುಣಮುಖರಾಗಿದ್ದಾರೆ.
29,96,470 ಮಂದಿಯಲ್ಲಿ ಇಲ್ಲಿಯವರೆಗೆ ಕೊರೊನಾ ಕಾಣಿಸಿಕೊಂಡಿದ್ದು. 29,51,654 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 6,574 ಸಕ್ರಿಯ ಪ್ರಕರಣಗಳಿದ್ದು,  ಇಬ್ಬರು ಸಾಮನ್ನಪ್ಪಿದ್ದಾರೆ, ಒಟ್ಟಾರೆ 38,213 ಮಂದಿ ಸಾಮನ್ನಪ್ಪಿದ್ದಾರೆ. ವಿಜಯಪುರ, ಯಾದಗಿರಿ, ಬಾಗಲಕೋಟೆ, ಹಾವೇರಿ, ಕೊಪ್ಪಳ, ದಾವಣೆಗೆರೆ, ಚಿಕ್ಕಬಳ್ಳಾಪುರ, ಬೀದರ್ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣಗಳು ದಾಖಲಾಗಿದೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: