ಕರ್ನಾಟಕಪ್ರಮುಖ ಸುದ್ದಿ

ಶಾಸಕರ ಹತ್ಯೆ ಸ್ಕೆಚ್; ಪ್ರಾಥಮಿಕ ತನಿಖೆಯ ವರದಿ ಬರಲಿ,ನಂತರ ಉನ್ನತ ತನಿಖೆಯ ಬಗ್ಗೆ ತೀರ್ಮಾನ ; ಸಿಎಂ

ರಾಜ್ಯ(ಬೆಂಗಳೂರು),ಡಿ.2 : – ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರ ಹತ್ಯೆಗೆ ಸ್ಕೆಚ್ ಕುರಿತಂತೆ ಮೊದಲು ಪ್ರಾಥಮಿಕ ತನಿಖೆಯ ವರದಿ ಬರಲಿ ಅದರ ನಂತರ ಉನ್ನತ ತನಿಖೆಯ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಇಂದು ಬೆಳಿಗ್ಗೆ   ಮಾಧ್ಯಮದೊಂದಿಗೆ  ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸಂಚು ಆರೋಪ ಪ್ರಕರಣದ ಕುರಿತು  ಪ್ರತಿಕ್ರಿಯಿಸಿ, ಈಗಾಗಲೇ ಪೊಲೀಸರು ಒಂದು ಕೇಸ್ ಅನ್ನು ದಾಖಲು ಮಾಡಿ ತನಿಖೆಯನ್ನು ಆರಂಭ ಮಾಡಿದ್ದಾರೆ, ಪ್ರಾಥಮಿಕ ತನಿಖೆಯನ್ನು ಮಾಡುತ್ತೇವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ . ನಂತರ ಏನು ಮಾಡಬೇಕೆಂದು ಪೊಲೀಸರು ನಿರ್ಧರಿಸುತ್ತಾರೆ.  ಕಾನೂನು ಅಡಿಯಲ್ಲಿ ಏನೇನೂ ನಡೆಯಬೇಕೋ ಅದೆಲ್ಲವು ನಡೆಯುತ್ತದೆ ಎಂದು ಹೇಳಿದ್ದಾರೆ.

ವಿರೋಧ ಪಕ್ಷದವರಿಂದ ಉನ್ನತ ತನಿಖೆಗೆ ಆಗ್ರಹಿಸಿರುವುದರ ಕುರಿತು ಪ್ರತಿಕ್ರಿಯಿಸಿ, ಮೊದಲು ಪ್ರಾಥಮಿಕ ತನಿಖೆಯ ವರದಿ ಬರಲಿ ಅದರ ನಂತರ ಉನ್ನತ ತನಿಖೆಯ ಬಗ್ಗೆ ತೀರ್ಮಾನವಾಗುತ್ತದೆ ಎಂದು ತಿಳಿಸಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: