ಮೈಸೂರು

ವಿದ್ಯುಚ್ಛಕ್ತಿ ಕಾಯ್ದೆ 2003ನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಡಿ.2:- ವಿದ್ಯುಚ್ಛಕ್ತಿ ಕಾಯ್ದೆ 2003ನ್ನು ರದ್ದುಗೊಳಿಸಿ ವಿದ್ಯುಚ್ಛಕ್ತಿ ಕಾಯ್ದೆ 2003ರ ತಿದ್ದುಪಡಿ ಮಸೂದೆ 2021ನ್ನು ಹಿಂಪಡೆಯುವಂತೆ ಒತ್ತಾಯಿಸಿ ಸೋಷಲಿಸ್ಟ್ ಯೂನಿಟಿ  ಸೆಂಟರ್ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ ನಡೆಯಿತು.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವಿಭಾಗ ಕಛೇರಿ ಎನ್ ಆರ್ ಮೊಹಲ್ಲಾ ಶ್ರೀ ಹರ್ಷ ರಸ್ತೆ ಇಲ್ಲಿ ನಡೆದ  ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ವಿದ್ಯುಚ್ಛಕ್ತಿಯನ್ನು ವ್ಯಾಪಾರದ ವಸ್ತುವಾಗಿ ನೋಡಬೇಡಿ. ಜನಕಲ್ಯಾಣ ಸೇವೆಯೆಂದು ಪರಿಗಣಿಸಿ, ಜನವಿರೋಧಿಯಾಗಿರುವ ವಿದ್ಯುಚ್ಛಕ್ತಿ ಕಾಯ್ದೆ 2003ನ್ನು ರದ್ದುಗೊಳಿಸಿ ವಿದ್ಯುಚ್ಛಕ್ತಿ ಕಾಯ್ದೆ 2003ರ ತಿದ್ದುಪಡಿ ಮಸೂದೆ 2021ನ್ನು ಹಿಂಪಡೆಯಿರಿ, ಪ್ರೀಪೇಯ್ಡ್   ಮೀಟರ್ ಗಳ ಸ್ಥಾಪನೆ ಮಾಡಕೂಡದು. ಕ್ರಾಸ್ ಸಬ್ಸಿಡಿ ರದ್ಧತಿಯ ಹೆಸರಿನಲ್ಲಿ ಜನಬಳಕೆಯ ವಿದ್ಯುತ್ತಿನ ದರ  ಏರಿಕೆ ಮಾಡಬೇಡಿ. ಕೃಷಿ ಬಳಕೆಗೆ ಉಚಿತ ವಿದ್ಯುತ್ ನೀಡಿ, ಮನೆಗಳು ಮತ್ತು ಸಣ್ಣ ಉದ್ದಿಮೆಗಳಿಗೆ 200ಯೂನಿಟ್ಟ ವರೆಗೂ ಉಚಿತ ವಿದ್ಯುತ್ ಪೂರೈಸಿ ಸದರಿ ಸಣ್ಣ ಉದ್ದಿಮೆಗಳಿಗೆ ಪ್ರತಿ ಯೂನಿಟ್ ಗೆ 1ರೂ.ದರದಲ್ಲಿ ಬಿಲ್ ನೀಡಿ, ಸೌರಶಕ್ತಿಯಂತಹ ಅಸಾಂಪ್ರದಾಯಿಕ ವಿದ್ಯುತ್ ಉತ್ಪಾದಿಸುವ ಸಾಮಾನ್ಯ ಬಳಕೆದಾರರ ಮೇಲೆ ಯಾವುದೇ ನಿರ್ಬಂಧ ಹೇರಬೇಡಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಬಿ.ರವಿ, ಯಶೋಧರ್ ವಿ, ಸೀಮಾ ಟಿ.ಎಸ್, ಹರೀಶ್ ಎಸ್.ಹೆಚ್, ಸುನಿಲ್ ಟಿ.ಆರ್ ಮತ್ತಿತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: