ಮೈಸೂರು

ಅರೆಕಾಲಿಕ ಉಪನ್ಯಾಸಕರ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸಿ.ಯೋಗಾನಂದ ಗೆ ಅಭಿನಂದನೆ

ಮೈಸೂರು,ಡಿ.2:-  ಅರೆಕಾಲಿಕ ಉಪನ್ಯಾಸಕರನ್ನು ಖಾಯಂ ಮಾಡುವಲ್ಲಿ ಸುದೀರ್ಘ ಹೋರಾಟ ನಡೆಸಿದ ಪದವಿ ಕಾಲೇಜುಗಳ ಅರೆಕಾಲಿಕ ಉಪನ್ಯಾಸಕರ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸಿ.ಯೋಗಾನಂದ ಅವರ ಕಾರ್ಯ ಶ್ಲಾಘನೀಯ ಎಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ತಿಳಿಸಿದರು.

ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದ ಆವರಣದ ಕಾವೇರಿ ಸಭಾಂಗಣದಲ್ಲಿಂದು ಪದವಿ ಮತ್ತು ಪದವಿಪೂರ್ವ ಕಾಲೇಜುಗಳ ಸೇವಾ ವಿಲೀನಗೊಂಡ ಉಪನ್ಯಾಸಕರುಗಳ ವೇದಿಕೆ ವತಿಯಿಂದ ನಡೆದ ಬಿ.ಸಿ ಯೋಗಾನಂದ್ ಅವರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು, ಅರೆಕಾಲಿಕ ಉಪನ್ಯಾಸಕರಿಗೆ ಸೇವಾಭದ್ರತೆ ಇಲ್ಲದಿರುವ ಸಂದರ್ಭದಲ್ಲಿಯೂ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿ ಯಶಸ್ಸುಗಳಿಸಿ ಅರೆಕಾಲಿಕ 3 ಸಾವಿರ ಉಪನ್ಯಾಸಕರನ್ನು ಖಾಯಂಗೊಳಿಸುವಲ್ಲಿ ಬಿ.ಸಿ ಯೋಗಾನಂದ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ, ಸತತ ಸೋಲಿನ ನಡುವೆಯೂ ಛಲ ಬಿಡದೆ ನ್ಯಾಯಾಲಯದ ಮೆಟ್ಟಿಲು ಹತ್ತಿ ನ್ಯಾಯ ಕೊಡಿಸುವಲ್ಲಿ ನಿರಂತರ ಶ್ರಮ ಹಾಕಿದ ನಿಮ್ಮ ಸಾಧನೆ ಅಮೋಘವಾದುದು. ಸಾವಿರಾರು ಕುಟುಂಬಗಳಿಗೆ ಆಸರೆಯಾಗಿ ಕರ್ತವ್ಯ ನಿರ್ವಹಿಸಿದಿರಿ, ಸಂಘಟನೆಗಳ ನೇತೃತ್ವ ವಹಿಸುವವರಿಗೆ ಆರೋಪ ಹಾಗೂ ಆಪಾದನೆ ಸಾಕಷ್ಟಿರುತ್ತವೆ ಇವೆಲ್ಲವನ್ನು ಮೆಟ್ಟಿ ನಿಲ್ಲುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ ಎಂದರು.

ಅಭಿನಂದನೆ ಸ್ವೀಕರಿಸಿದ ಬಿ.ಸಿ ಯೋಗಾನಂದ ಅವರು ಮಾತನಾಡಿ ತಮ್ಮ ಹೋರಾಟದ ಹೆಜ್ಜೆ ಗುರುತುಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ನೀವು ನನ್ನಮೇಲೆ ಇಟ್ಟಿದ್ದ ವಿಶ್ವಾಸದಿಂದ ಸಾಧ್ಯವಾಯಿತು, ಇದು ನನ್ನೊಬ್ಬನ ಹೋರಾಟವಲ್ಲ ಉಪನ್ಯಾಸಕರ ಬೆಂಬಲ ಮತ್ತು ಸಹಕಾರದಿಂದ ಮಾತ್ರ ಸಾಧ್ಯವಾಯಿತು ಎಂದರು.

ಕಾರ್ಯಕ್ರಮದಲ್ಲಿ ಮಹಾರಾಣಿ ವಾಣಿಜ್ಯ ಪದವಿ ಕಾಲೇಜಿನ ಸಹ ಪ್ರಾಧ್ಯಾಪಕ ಮೈಸೂರು ಕೃಷ್ಣಮೂರ್ತಿ, ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಅಧಿಕಾರಿ ಪ್ರಸನ್ನ,  ಚಂದ್ರಣ್ಣ, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ, ದೊಡ್ಡ ಆಚಾರಿ, ಮಹದೇವ, ವೇದಿಕೆಯ ಅಧ್ಯಕ್ಷರಾದ ಡಾ.ಎಂ.ಎನ್ ಶಿವಣ್ಣ, ಕೃಷ್ಣಕುಮಾರ್, ಸಂಚಾಲಕ ಎನ್. ಮಹೇಶ್ ಕುಮಾರ್ ಆರಾಧ್ಯ, ಗಂಗಾಧರ ಆಚಾರ್, ಉಪನ್ಯಾಸಕಿ ಹೇಮಲತಾ,   ಪಲ್ಲವಿ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: