ಮೈಸೂರು

ಅವಧಿ ಮುಗಿದಿದ್ದರೂ  ಗಣಿಗಾರಿಕೆ ನಡೆಸುತ್ತಿರುವ ಮೈಸೂರು ಮಿನರಲ್ಸ್ ಪ್ರೈ.ಲಿ.ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ದೂರು

ಮೈಸೂರು,ಡಿ.2:- ಅನಧಿಕೃತವಾಗಿ ರೈತರ ಜಮೀನನ್ನು ವಂಚಿಸುವ ಮೂಲಕ ಮೈಸೂರು ಮಿನರಲ್ಸ್ ಪ್ರೈವೇಟ್ ಲಿ. ಅವಧಿ ಮುಗಿದಿದ್ದರೂ  ಗಣಿಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಿ ಮಹಾನಾಯಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕ, ಪ್ರಗತಿಪರ ರೈತರ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ದೂರನ್ನು ನೀಡಲಾಯಿತು.

ಈ ಸಂದರ್ಭ ಮಾತನಾಡಿ ರಾಜ್ಯದ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಕಾರ್ಯ, ಚಾಮನಮಾದನಹಳ್ಳಿ ಮತ್ತು ಕುರಿಹುಂಡಿ ಗ್ರಾಮಗಳ ಬಳಿ ಇರುವ ರೈತರ ಕೃಷಿ ಜಮೀನನ್ನು ಮೈಸೂರು ಮಿನರಲ್ಸ್  ಪ್ರೈವೇಟ್ ಲಿ ಕಂಪನಿಯು ರೈತರಿಗೆ ಜಮೀನುಗಳನ್ನು ಕೇಂದ್ರ ಸರ್ಕಾರ ಆಕ್ರಮಿಸಿಕೊಂಡಿದೆ ಎಂದು ಸುಳ್ಳು ಹೇಳಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಬಾಕ್ಸೈಟ್ ಗಣಿಗಾರಿಕೆಯನ್ನು ನಿಯಮಗಳನ್ನು ಮೀರಿ ನಡೆಸುತ್ತಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಹೋಬಳಿ, ಕಾರ್ಯ, ಗ್ರಾಮ ಮತ್ತು ಚಾಮನಮಾದಹಳ್ಳಿ, ಕುರಿಹುಂಡಿ ಗ್ರಾಮದಲ್ಲಿ  ಇರುವ ಸುಮಾರು 150ಎಕ್ರೆ ಕೃಷಿ ಜಮೀನಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡಲಾಗುತ್ತಿದೆ. ಗಣಿಗಾರಿಕೆ ನಡೆಸುವ ಜಾಗದಲ್ಲಿ ಸುಮಾರು 500ಅಡಿಗೂ ಹೆಚ್ಚು ಆಳವಾಗಿ ಮ್ಯಾಗ್ನಾ ಸೈಟ್ ಖನಿಜಾಂಶಗಳನ್ನು ಲೂಟಿ ಮಾಡಲಾಗಿದೆ. ಈ ಕಾಳದಂಧೆಯಲ್ಲಿ ಕೆಲವು ರಾಜಕಾರಣಿಗಳು, ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಶಾಮೀಲಾಗಿ ಮೈಸೂರು ಮಿನರಲ್ ಪ್ರೈ.ಲಿ.ಕಂಪನಿಯ ಜೊತೆ ಅಕ್ರಮ ಲಾಭ ಪಡೆಯಲು ವ್ಯಾಪ್ತಿ ಮೀರಿ ಮತ್ತು ನಿಯಮ ಮೀರಿ ಗಣಿಗಾರಿಕೆ ನಡೆಸಲು ಅನುವು ಮಾಡಿಕೊಟ್ಟಿರುತ್ತಾರೆ ಎಂದು ದೂರಿದರು. 150 ಎಕ್ರೆ ಕೃಷಿ ಜಮೀನುಗಳನ್ನು ರೈತರಿಗೆ ಹೆದರಿಸಿ ಕೇಂದ್ರ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ. ಗ ಣಿಗಾರಿಕೆ ನಡೆಸುತ್ತಿದೆ. ನಿಮಗೆ ಮುಂದೆ ಪ ರಿಹಾರಕೊಡುತ್ತದೆ ಎಂದು ಪುಸಲಾಯಿಸಿ ಮೈಸೂರು ಮಿನರಲ್ ಪ್ರೈ.ಲಿ.ತಪ್ಪು ಸಂಗತಿಯನ್ನು ರೈತರಿಗೆ ಹೇಳಿ ಜಮೀನುಗಳನ್ನು ಅಕ್ರಮವಾಗಿ ಗಣಿಗಾರಿಕೆಗೆ ಬಳಸಿಕೊಳ್ಳಲಾಗಿದೆ. ಈ ಸಂಬಂಧ ರೈತರು ಈಗಾಗಲೇ ಹಲವಾರು ಪ್ರತಿಭಟನೆಗಳನ್ನು ಮಾಡಿದ್ದಾರೆ. ರೈತರಿಗೆ ಪರಿಹಾರ ಸಿಕ್ಕಿಲ್ಲ. ರೈತರ ಜೀವನ ಕಷ್ಟಕರವಾಗಿದೆ ಎಂದರು. ಭೂಮಿ ಅತಿಕ್ರಮಿಸಿರುವ ಬಗ್ಗೆ ಕಾನೂನು ಕ್ರಮ ಜರುಗಿಸಿ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲವೇ ಬದಲಿ ಪರಿಹಾರ, ಬದಲಿ ಭೂ ಮಂಜೂರು ಮಾಡುವುದು ಸಹ ರೈತರಿಗೆ ಸೂಕ್ತ ರೀತಿಯ ಪರಿಹಾರವಾಗಿದ್ದು ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಮಹಾನಾಯಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರು, ಪ್ರಗತಿಪರ ಸಂಘಟನೆಯ ಜಿಲ್ಲಾಧ್ಯಕ್ಷರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

comments

Related Articles

error: