ಮೈಸೂರು

‘ಕನ್ನಡ ವಿಕಾಸ ರತ್ನ’ ರಾಜ್ಯ ಮಟ್ಟದ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮೈಸೂರು,ಡಿ.2 :-  ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ವತಿಯಿಂದ ಕೊಡಮಾಡುವ ‘ಕನ್ನಡ ವಿಕಾಸ ರತ್ನ’ ರಾಜ್ಯ ಮಟ್ಟದ ಪ್ರಶಸ್ತಿಗೆ ಆಸಕ್ತರು ಅರ್ಜಿಯನ್ನು ಸಲ್ಲಿಸಲು ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಕೋರಿದೆ.

ಇಂದು ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ಹೆಚ್.ಎಲ್.ಯಮುನಾ ಮಾತನಾಡಿ,  ನಮ್ಮ ಸಂಸ್ಥೆಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ಹಬ್ಬ ಕಾರ್ಯಕ್ರಮವನ್ನು ಡಿ.25 ರಂದು ಆಯೋಜಿಸಿದ್ದು, ಈ ವರ್ಷವೂ ಕನ್ನಡ ವಿಕಾಸ ರತ್ನ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಕೊಡುತ್ತಿದ್ದು ಹಲವಾರು ಕ್ಷೇತ್ರಗಳಲ್ಲಿ ಅಪಾರ ಸೇವೆ ಮತ್ತು ಸಾಧನೆ ಮಾಡಿರುವವರನ್ನು ಆಯ್ಕೆಮಾಡಲು ಅರ್ಹ ಮತ್ತು ಆಸಕ್ತ ಸಾಧಕರಿಂದ ಅರ್ಜಿಯನ್ನು ಆಹ್ವಾನಿಸುತ್ತಿದ್ದೇವೆ ಎಂದು ತಿಳಿಸಿದರು.

ದಿ.ರಾಜಶೇಖರ ಕೋಟಿಯವರ ಹೆಸರಿನಲ್ಲಿ ಕಳೆದ 4 ವರ್ಷಗಳಿಂದ ಪ್ರಶಸ್ತಿ ಕೊಡುತ್ತಿದ್ದು, ಈ ವರ್ಷವೂ ಹತ್ತು ಸಾವಿರ ನಗದಿನೊಂದಿಗೆ ದಿ.ರಾಜಶೇಖರ ಕೋಟಿ ಪುರಸ್ಕಾರವನ್ನು ಕೊಡುತ್ತಿದ್ದೇವೆ. ನಮ್ಮ ಸಂಸ್ಥೆಯಲ್ಲಿ 8 ವರ್ಷ ಮಾರ್ಗದರ್ಶಿಗಳಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದ ದಿ.ತಲಕಾಡು ದಾಸೇಗೌಡರ ಹೆಸರಿನಲ್ಲಿ 2 ವರ್ಷಗಳಿಂದ ಪ್ರಶಸ್ತಿ ಪ್ರದಾನ ಮಾಡುತ್ತಿದ್ದು ಈ ವರ್ಷವೂ ಮಾಡುತ್ತಿದ್ದೇವೆ  ಎಂದು ಹೇಳಿದರು.

ಆಸಕ್ತರು.  ನಂ.03,ಸಿಬಿಎಸ್ ಬಿಲ್ಡಿಂಗ್,ಎರಡನೇ ಮಹಡಿ, ಕೆ.ಆರ್. ಸರ್ಕಲ್, ಮೈಸೂರು ಇಲ್ಲಿಗೆ ಅರ್ಜಿಗಳನ್ನು ಡಿ.12 ರ ಒಳಗೆ ಕಳುಹಿಸಬಹುದು . ಹೆಚ್ಚಿನ ಮಾಹಿತಿಗೆ ಮೊ.9902698623 ಯನ್ನು ಸಂಪರ್ಕಿಸಲು ತಿಳಿಸಿದರು. (ಕೆ.ಎಸ್,ಎಸ್.ಎಂ)

Leave a Reply

comments

Related Articles

error: