ಮೈಸೂರು

ಐಡಿಯಲ್ ಜಾವ ಎಂಪ್ಲಾಯೀಸ್ ಗಳ ಹಿಡಿದಿಟ್ಟಿರುವ ವೇತನ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಡಿ.2 :-  ಐಡಿಯಲ್ ಜಾವ ಎಂಪ್ಲಾಯೀಸ್ ಗಳ ಹಿಡಿದಿಟ್ಟಿರುವ ವೇತನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ   ಐಡಿಯಲ್ ಜಾವ ಎಂಪ್ಲಾಯೀಸ್ ಅಸೋಸಿಯೇಷನ್ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರಿನ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮಾತನಾಡಿ, ಐಡಿಯಲ್ ಜಾವ ಕಂಪನಿಯ 1995 ನೇ ಇಸವಿಯಲ್ಲಿ ಬೀಗ ಮುದ್ರ ಮಾಡಿಸಿರುವುದರಿಂದ ನಮಗೆ ಬರ ಬೇಕಾದ ಹಣವನ್ನು ಕೊಡದೆ (ಸುಮಾರು ಪತ್ರಿಯೊಬ್ಬರಿಗೂ 10 ಲಕ್ಷ) ಮತ್ತು ಅದರಲ್ಲಿ ಪ್ರತಿಯೊಬ್ಬರಿಗೂ ಸೇವಾ ಅವಧಿಯಲ್ಲಿ ರಿಜೆಕ್ಟ್ ಮಾಡಿದವರಿಗೆ 90% ಕೊಡದೆ ಬರೀ 10% ಹಣವನ್ನು ಕೊಟ್ಟು  ಬರ ಬೇಕಾದ 80% ಹಣದಲ್ಲಿ ಬರೀ 20% ಕೊಟ್ಟು ಮೋಸ ಮಾಡಿ ಕಂಪನಿಗೆ ಬೀಗ ಜಡಿಯಲಾಗಿದೆ.  ಮನಗೆ ಬರಬೇಕಾದ  90% ಹಣವನ್ನು ನಮಗೆ  ದೊರಕಿಸಿ ಕೊಡಿ ಎಂದು ಒತ್ತಾಯಿಸಿದರು. (ಕೆ.ಎಸ್,ಎಸ್.ಎಂ)

Leave a Reply

comments

Related Articles

error: