ದೇಶಪ್ರಮುಖ ಸುದ್ದಿ

ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ರೋಸಯ್ಯ ನಿಧನ

ದೇಶ(ಆಂಧ್ರಪ್ರದೇಶ),ಡಿ.4 :-  ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಕೋನಿಜೇಟಿ ರೋಸಯ್ಯ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ಕಡಿಮೆ ರಕ್ತದೊತ್ತಡಕ್ಕೆ ಒಳಗಾಗಿ ಬಿದ್ದ ಅವರನ್ನು ಬಂಜಾರ ಹಿಲ್ಸ್ ಸ್ಟಾರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಮುಂಜಾನೆ ನಿಧನರಾಗಿದ್ದರೆ.

ಕೆ. ರೋಸಯ್ಯ ಕಾಂಗ್ರೆಸ್ ನ ಪ್ರಮುಖ ನಾಯಕರು . ಅವರು ಶಾಸಕರಾಗಿ,ಎಂ.ಎಲ್.ಸಿ , ಸಂಸದರಾಗಿ ಮತ್ತು ಮೊಟ್ಟಮೊದಲ ಬಾರಿಗೆ ಆಂಧ್ರಪ್ರದೇಶದ ಮರಿ ಚೆನ್ನಾ ರೆಡ್ಡಿ ಸರ್ಕಾರದಲ್ಲಿ ರಸ್ತೆ ಮತ್ತು ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ, ಅವಿಭಜಿತ ಆಂಧ್ರಪ್ರದೇಶದ  ಹಣಕಾಸು ಸಚಿವರಾಗಿಯೂ ಸೇವೆ ಸಲ್ಲಿಸಿ ಸುಮಾರು 7-8 ಬಾರಿ ಬಜೆಟ್ ಮಂಡನೆ ಮಾಡಿ ದಾಖಲೆ ನಿರ್ಮಿಸಿದ್ದಾರೆ, ಅಲ್ಲದೆ ತಮಿಳು  ಮತ್ತು ಕರ್ನಾಟಕ ರಾಜ್ಯದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: