ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿದೆ ನಟ ಶಿವರಾಂ ಆರೋಗ್ಯ

ರಾಜ್ಯ(ಬೆಂಗಳೂರು),ಡಿ.4:-  ಹಿರಿಯ ನಟ ಶಿವರಾಂ ಅವರ ಒಂದೊಂದೇ ಅಂಗಗಳು ಕ್ಷೀಣೀಸುತ್ತಿರುವುದನ್ನು ನೋಡಿದರೆ ಅವರ ಆರೋಗ್ಯದಲ್ಲಿ ಬೆಳವಣಿಗೆ ಆಗುವುದು ತುಂಬ ಕಷ್ಟ ಅನಿಸುತ್ತಿದೆ ಎಂದು ಪ್ರಶಾಂತ್ ಆಸ್ಪತ್ರೆಯ ವೈದ್ಯ ಡಾ. ಮೋಹನ್ ತಿಳಿಸಿದ್ದಾರೆ.

ಇಂದು ಶಿವರಾಂ ಅವರ ಸ್ಥಿತಿಯ ಬಗ್ಗೆ  ಪ್ರಶಾಂತ್ ಆಸ್ಪತ್ರೆಯ ವೈದ್ಯರಾದ  ಡಾ. ಮೋಹನ್ ಮಾಧ್ಯಮದೊಂದಿಗೆ ಮಾತನಾಡಿ ಶಿವರಾಂ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆಗಳು ಕಾಣುತ್ತಿಲ್ಲ. ನಿನ್ನೆ ನಾವು ಹೇಳಿದ್ದೇವೆ.  ಎಂ.ಆರ್.ಐ ಸ್ಕ್ಯಾನ್ ಮಾಡಿ ನೋಡಿ ಅವರ ಮೆದುಳಿನ ಊತ ಕಡಿಮೆಯಾಗಿದ್ದರೆ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲು ಮುಂದಾಗುತ್ತೇವೆ ಅಂತ.  ಆದರೆ ಈಗ ಅವರ ಹೃದಯದ ಬಡಿತವು ಕಡಿಮೆಯಾಗುತ್ತಿದೆ.  ಅವರ ಸ್ಥಿತಿ ಗಂಭೀರವಾಗುತ್ತಿದೆ, ಅವರ ಒಂದೊಂದೇ ಅಂಗಗಳು ಕ್ಷೀಣಿಸುತ್ತಿರುವುದನ್ನು ನೋಡಿದರೆ ಅವರ ಆರೋಗ್ಯದಲ್ಲಿ ಬೆಳವಣಿಗೆ ಆಗುವುದು ತುಂಬ ಕಷ್ಟ ಅನಿಸುತ್ತಿದೆ ಎಂದು  ಹೇಳಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: