ಕರ್ನಾಟಕಪ್ರಮುಖ ಸುದ್ದಿ

ಡೆಲ್ಟಾಗೆ ನೀಡುವ ಚಿಕಿತ್ಸೆಯನ್ನೇ  ಒಮಿಕ್ರಾನ್ ಗೆ ನೀಡಲು ತೀರ್ಮಾನಿಸಲಾಗಿದೆ : ಸಿಎಂ ಬಸವರಾಜ್ ಬೊಮ್ಮಾಯಿ

ರಾಜ್ಯ(ಬೆಂಗಳೂರು),ಡಿ. 4 :- ಡೆಲ್ಟಾಗೆ ನೀಡುವ ಚಿಕಿತ್ಸೆಯನ್ನೇ  ಒಮಿಕ್ರಾನ್ ಗೆ ನೀಡಲು ನಿನ್ನೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಇಂದು   ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಿನ್ನೆ ನಡೆದ ಒಮಿಕ್ರಾನ್  ನ ತುರ್ತು ಸಭೆಯಲ್ಲಿ ತೆಗೆದು ಕೊಂಡ ನಿರ್ಧಾರಗಳ ಬಗ್ಗೆ ಹೇಳಿದರು. ಹೊಸ ವೈರಾಣು ಒಮಿಕ್ರಾನ್ ಎಂಬುದರ ಬಗ್ಗೆ ನಮಗೆ ಪ್ರಾಥಮಿಕವಾದ ವರದಿ ಈಗ ಸಿಕ್ಕಿದೆ, ಒಂದೂ ಪೂರ್ಣಪ್ರಮಾಣದ ವರದಿಯನ್ನು ತೆಗೆದುಕೊಳ್ಳಲು ನಾನು ಆರೋಗ್ಯ ಇಲಾಖೆಗೆ ಸೂಚನೆಯನ್ನು ಕೊಟ್ಟಿದ್ದೇನೆ. ಮತ್ತೆ ಹೊರ ದೇಶದಲ್ಲಿ ಒಮಿಕ್ರಾನ್ ಗೆ ನೀಡುತ್ತಿರುವ ಚಿಕಿತ್ಸೆ ಬಗ್ಗೆಯೂ ತಿಳಿದುಕೊಳ್ಳಲು  ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ನಮಗೆ ಇರುವ ಮಾಹಿತಿ ಪ್ರಕಾರ ಡೆಲ್ಟಾ ವೈರಾಣುವಿಗೆ ನೀಡುತ್ತಿರುವ ಚಿಕಿತ್ಸೆಯನ್ನೇ  ಒಮಿಕ್ರಾನ್ ಗೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ನಿನ್ನೆ  ನಡೆದ ಸಭೆಯಲ್ಲಿ ನಾವು ಅದೇ ಚಿಕಿತ್ಸೆಯನ್ನು ಮುಂದುವರಿಸುವ ಕುರಿತು ತೀರ್ಮಾನಿಸಲಾಗಿದೆ.

ಎಲ್ಲರೂ ಹೇಳುತ್ತಿರುವುದು , ಒಮಿಕ್ರಾನ್ ಬೇಗನೆ ಹರಡುತ್ತದೆ ಅದರೆ ಅಷ್ಟೊಂದು ಪರಿಣಾಮಕಾರಿ  ಇಲ್ಲ ಎಂದು . ಆದರೆ ನಾವು ಅದನ್ನು ಕೂಡ ಪರೀಕ್ಷೆ ಮಾಡಬೇಕು.  ಸೋಂಕಿತರ ಸಂಪರ್ಕಿತರ  ಇತಿಹಾಸ, ಪ್ರಯಾಣದ ಇತಿಹಾಸ ವನ್ನು ಸಹ ಪಡೆಯಲು ಹೇಳಿದ್ದೇನೆ  ಎಂದು ತಿಳಿಸಿದ್ದಾರೆ.

ನಾವು ಮೊದಲು ಕೊರೊನಾದ ಸೋಂಕು ತಗಲಿದ ಹತ್ತು ಮಂದಿ ಒಂದೇ ಸ್ಥಳದಲ್ಲಿ ಇದ್ದರೆ ಅಂತಹ ಸ್ಥಳವನ್ನು ಕ್ಲಸ್ಟರ್ ಎಂದು ಹೇಳುತ್ತಿದ್ದೆವು. ಆದರೆ ಈಗ ಮೂರು ಜನರಲ್ಲಿ ಕಂಡು ಬಂದರೂ ಆ ಸ್ಥಳವನ್ನು ಕ್ಲಸ್ಟರ್ ಎಂದು ಹೇಳಿ ಅಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲು ಸೂಚಿಸಲಾಗಿದೆ.   ಕೊರೊನಾ  ಸೋಂಕು ಶಾಲಾ,ಕಾಲೇಜು,ವಿದ್ಯಾರ್ಥಿಗಳ ವಸತಿ ನಿಲಯಗಳು  ಮತ್ತು ಬೆಂಗಳೂರಿನ ಅಪಾರ್ಟಮೆಂಟ್ ಗಳಲ್ಲಿ ಬೇಗನೇ ಹರಡುವಿಕೆ ಹೆಚ್ಚಿದ್ದು ಅಲ್ಲಿನವರಿಗೆ ಸೂಚನೆಗಳನ್ನು  ನೀಡಲಾಗಿದೆ. ಎಲ್ಲರೂ ಡಬಲ್ ಡೋಸ್ ಲಸಿಕೆಯನ್ನು ಪಡೆದಿರಬೇಕು. ಕೊರೊನಾ ನಿಯಮಾವಳಿಗಳನ್ನು ಪಾಲಿಸ ಬೇಕು ಎಂದು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇರುವ ಮೆಡಿಕಲ್ ,ನರ್ಸಿಂಗ್, ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಪರೀಕ್ಷೆ ಮಾಡಬೇಕು ಮತ್ತು ಲಸಿಕೆ ಪಡೆಯದೆ ಇರುವವರಿಗೆ ಲಸಿಕೆ ಪಡೆಯಲು ಸೂಚಿಸಬೇಕು ಎಂದು ಹೇಳಿದ್ದೇನೆ ಎಂದಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: