ಕರ್ನಾಟಕಪ್ರಮುಖ ಸುದ್ದಿ

 ದ.ಆಫ್ರಿಕಾದಿಂದ ಬಂದ 10 ಮಂದಿ ವಿಮಾನ ನಿಲ್ದಾಣದಿಂದಲೇ ನಾಪತ್ತೆಯಾಗಿದ್ದಾರೆಂದರೆ ಬಿಜೆಪಿ ಕಾರ್ಯವೈಖರಿ ಹೇಗಿದೆಯೆಂಬುದು ತಿಳಿಯತ್ತೆ : ಮಾಜಿ ಸಿಎಂ ಸಿದ್ದರಾಮಯ್ಯ

ರಾಜ್ಯ(ಶಿವಮೊಗ್ಗ),ಡಿ.4 :-  ದಕ್ಷಿಣ ಆಫ್ರಿಕಾದಿಂದ ಬಂದ 10 ಜನರು ವಿಮಾನ ನಿಲ್ದಾಣದಿಂದಲೇ ನಾಪತ್ತೆಯಾಗಿದ್ದಾರೆ ಎಂದರೆ ಬಿಜೆಪಿಯ ಕಾರ್ಯವೈಖರಿ ಹೇಗಿದೆ ಎಂಬುದು ಗೊತ್ತಾಗುತ್ತದೆ.  ಅಲ್ಲೂ ಬಿಜೆಪಿ ಭ್ರಷ್ಟಚಾರವಿರುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ವಿಧಾನ ಪರಿಷತ್ ಚುನಾವಣೆಯ ಹಿನ್ನಲೆಯಲ್ಲಿ  ಶಿವಮೊಗ್ಗದಲ್ಲಿ ಇಂದು ಮಾಜಿ ಮುಖ್ಯಮಂತ್ರಿ, ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ    ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವ ವೇಳೆ ಮಾಧ್ಯಮದೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರವೇ ಭ್ರಷ್ಟರ ಪಕ್ಷವಾಗಿದೆ.  ಅವರು ಒಮಿಕ್ರಾನ್ ತಡೆಯಲು ಏನು ಮಾಡುತ್ತಾರೆ. ಅವರ ಕಾರ್ಯವೈಖರಿ ಬರಿ ಲಂಚ ತಿನ್ನುವುದು. ಅಷ್ಟೇ ಅಲ್ಲದೆ ಒಬ್ಬ ಗುತ್ತಿಗೆದಾರರ ಸಂಘದ ಅಧ್ಯಕ್ಷ ಪ್ರಧಾನ ಮಂತ್ರಿಗೆ ಪತ್ರ ಬರೆದು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವ  ಲಂಚದ ದೌರ್ಜನ್ಯ ತಡೆಯಿರಿ ಎಂದಿದ್ದು, ಇಂತಹ ಘಟನೆ ಈ ಹಿಂದೆ ಯಾವಾಗಲಾದರೂ ಘಟಿಸಿದೆಯಾ? ಇದನ್ನೆಲ್ಲ ನಾನು ಹೇಳಿದರೆ ಅವರಿಗೆ ಕೋಪ ಬರುತ್ತದೆ. ಅದಕ್ಕೆ ನಾನು ರಾಜ್ಯಪಾಲರನ್ನು ಭೇಟಿ ಮಾಡಿ ಸೆಕ್ಷನ್ 356 ಅನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಹೇಳಿ ಈ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಏನೇ ಪ್ರಕರಣವನ್ನು ನಾವು ಹೇಳಿದರು ಅದು ಸಿದ್ದರಾಮಯ್ಯನವರ, ಕಾಂಗ್ರೆಸ್ ನವರ ಅವಧಿಯಲ್ಲಿ ನಡೆದಿತ್ತು ಎಂದು ಹೇಳುತ್ತಾರೆ ಬಿ.ಎಸ್. ಯಡಿಯೂರಪ್ಪ ನವರ ಅವಧಿಯಲ್ಲಿ ಹಗರಣಗಳು ನಡೆದಾಗ ಬೊಮ್ಮಾಯಿ ಗೃಹಸಚಿವರಾಗಿರಲಿಲ್ಲವೇ? ಆವಾಗಲೇ ತನಿಖೆ ಮಾಡಬೇಕಿತ್ತು. ಯಾಕೇ ಮಾಡಲಿಲ್ಲ?  ತನಿಖೆ ಮಾಡಿದ್ದರೆ ಅವರ ಸರಕಾರದ ಮಾನ ಮರ್ಯಾದೆ ಹೋಗುತ್ತದೆ ಎಂದು ಮಾಡಲಿಲ್ಲ . ಸರಿ ನಮ್ಮ ಕಾಲದಲ್ಲಿ ನಡೆದಿದ್ದರೆ ನಿಮಗೆ ಧಮ್ ಇದ್ದರೆ ಸುಪ್ರಿಮ್ ಕೋರ್ಟ್ ನ್ಯಾಯಾಂಗದಿಂದ  ನಮ್ಮ ಕಾಲದಿಂದಲೇ ತನಿಖೆಯನ್ನು ಮಾಡಿ ಎಂದು ಸವಾಲು ಹಾಕಿದ್ದಾರೆ.

ಮಾಧ್ಯಮದವರು ಜೆಡಿಎಸ್ ನ  ಬಗ್ಗೆ  ಕೇಳಿದಾಗ ಪ್ರತಿಕ್ರಿಯಿಸಿ   ಜೆಡಿಎಸ್ ಬಿದ್ದು ಹೋಗುತ್ತಿರುವ ಪಕ್ಷ ಪದೇ ಪದೇ ಅವರ ಬಗ್ಗೆನೇ ಕೇಳುತ್ತಿರಾ?  ಬಿಜೆಪಿ ಬಗ್ಗೆನೂ  ಕೇಳಿ ಎಂದು ಗರಂ ಆಗಿದ್ದಾರೆ .

ದಕ್ಷಿಣ ಆಫ್ರಿಕಾದಿಂದ ಬಂದ ಹತ್ತು ಮಂದಿ  ವಿಮಾನ ನಿಲ್ದಾಣದಿಂದ ನಾಪತ್ತೆ ಯಾಗಿರುವ ಕುರಿತು ಮಾತನಾಡಿ, ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ಮತ್ತು ಒಳಗೆ ಬರಲು ಪಾಸ್ ಪೊರ್ಟ್ ತೋರಿಸಬೇಕು , ಅಂತಹುದರಲ್ಲಿ ಅಲ್ಲಿಂದಲೇ ನಾಪತ್ತೆಯಾಗಿದ್ದಾರೆ. ಇದೇ  ಬಿಜೆಪಿಯವರ ಕಾರ್ಯವೈಖರಿಯನ್ನು  ತೋರಿಸುತ್ತದೆ.  ಅಲ್ಲಿಯೂ ಬಿಜೆಪಿಯ ಭ್ರಷ್ಟಚಾರವಿರುತ್ತದೆ  ಎಂದು ಆರೋಪಿಸಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: