ಕರ್ನಾಟಕಪ್ರಮುಖ ಸುದ್ದಿ

ಸಿಎಂ ಬದಲಾವಣೆ ಹೇಳಿಕೆ : ಈಶ್ವರಪ್ಪನವರ ಮಾತು ಪಕ್ಷಕ್ಕೆ ವೇದವಾಕ್ಯವೆಂದು ತಿಳಿದಿದ್ದೇನೆ; ಡಿಕೆಶಿ

ರಾಜ್ಯ(ಶಿವಮೊಗ್ಗ),ಡಿ.4 : – ಈಶ್ವರಪ್ಪನವರು ರಾಜ್ಯದ ರಾಜಕಾರಣದಲ್ಲೇ ಮುಖ್ಯಮಂತ್ರಿಗಳ ಬದಲಾವಣೆ ಎಂದು ಹೇಳಿದ್ದಾರೆ ಅವರು ಆ ಪಕ್ಷದ ಹಿರಿಯರು, ಅವರ ಮಾತು ಅಂದರೆ ಪಕ್ಷಕ್ಕೆ ವೇದ ವಾಕ್ಯ ಎಂದು ನಾನು ತಿಳಿದುಕೊಂಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ವಿಧಾನ ಪರಿಷತ್ ಚುನಾವಣೆಯ ಹಿನ್ನಲೆಯಲ್ಲಿ  ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವ ವೇಳೆ ಮಾಧ್ಯಮದೊಂದಿಗೆ ಮಾತನಾಡಿ ರಾಜ್ಯದಲ್ಲಿ ಸಿ.ಎಂ ಬದಲಾವಣೆಯ ಬಗ್ಗೆ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿರುವುದಕ್ಕೆ ಪ್ರತಿಕ್ರಿಯಿಸಿ ಸಚಿವ ಈಶ್ವರಪ್ಪನವರು ರಾಜ್ಯದ ರಾಜಕಾರಣದಲ್ಲೇ ಮುಖ್ಯಮಂತ್ರಿಗಳ ಬದಲಾವಣೆ ಎಂದು ಹೇಳಿದ್ದಾರೆ. ಅವರು ಆ ಪಕ್ಷದ ಹಿರಿಯರು, ಈ ಹಿಂದೆ ಪಕ್ಷದ ಅಧ್ಯಕ್ಷರಾಗಿದ್ದರು. ಅವರ ಮಾತು ಅಂದರೆ ಪಕ್ಷಕ್ಕೆ ವೇದ ವಾಕ್ಯ ಎಂದು ನಾನು ತಿಳಿದುಕೊಂಡಿದ್ದೇನೆ. ಅವರು ನುಡಿದ ಮೇಲೆ ಏನಿದೆ. ಯಡಿಯೂರಪ್ಪನವರ ವಿಚಾರದಲ್ಲೂ ಹೀಗೆ  ಹೇಳಿದ್ದರು , ಇದು ಕೂಡ ಅದೇ ರೀತಿಯಾಗಬಹುದು ಎಂದಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: