ಮೈಸೂರು

ಡಿ.26 ರಾಜ್ಯಮಟ್ಟದ ವಿಶ್ವ ರೈತ ದಿನಾಚರಣೆ

ಮೈಸೂರು,ಡಿ.4 : – ಡಿಸೆಂಬರ್ 26 ರಂದು ರಾಜ್ಯ ಮಟ್ಟದ ವಿಶ್ವ ರೈತ ದಿನಾಚರಣೆ ಆಚರಿಸಲು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ,ರಾಜ್ಯ ಕಬ್ಬು ಬೆಳೆಗಾರರ ಸಂಘ ತೀರ್ಮಾನಿಸಿದೆ.
ಇಂದು ಮೈಸೂರು ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಾರಾಯಣ ರೆಡ್ಡಿ ಮಾತನಾಡಿ ರೈತರು ಜಾಗತಿಕವಾಗಿ ಆಹಾರ ಧಾನ್ಯ ಬೆಳೆದು ಜೀವ ಸಂಕುಲಕ್ಕೆ ನೀಡುವ ಸ್ವಾರ್ಥರಹಿತ ಸೇವೆಯ ಸ್ಮರಣಾರ್ಥವಾಗಿ ಆಚರಿಸಲಾಗುವ ವಿಶ್ವ ರೈತ ದಿನಾಚರಣೆಯನ್ನು ಭಾರತ ದೇಶದಲ್ಲಿ ಪ್ರತಿವರ್ಷ ಡಿಸೆಂಬರ್ 23 ರಂದು ಆಚರಿಸುತ್ತಿದ್ದು, ಬೇರೆ ಬೇರೆ ದೇಶಗಳಲ್ಲಿ ಬೇರೆ ದಿನಗಳಂದು ಆಚರಿಸಲ್ಪಡುತ್ತದೆ. ಭಾರತದಲ್ಲಿ ಐದನೇ ಪ್ರಧಾನಿಯಾಗಿದ್ದ ಚೌಧರಿ ಚರಣ್ ಸಿಂಗ್ ಆಡಳಿತ ಅವಧಿಯಲ್ಲಿ ಕೃಷಿ ಕ್ಷೇತ್ರಕ್ಕೆ ಅನುಕೂಲವಾಗುವ ರೈತ ಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ ನೆನಪಿಗಾಗಿ ರಾಷ್ಟ್ರೀಯ ರೈತ ದಿನ ಭಾರತೀಯ ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ . ಈ ಹಿನ್ನಲೆಯಲ್ಲಿ ಡಿಸೆಂಬರ್ 26 ರಂದು ಮೈಸೂರಿನಲ್ಲಿ ರಾಜ್ಯ ಮಟ್ಟದ ವಿಶ್ವ ರೈತ ದಿನಾಚರಣೆಯನ್ನು ಆಚರಿಸಲು ತೀರ್ಮಾನಿಸಿದ್ದೇವೆ ಎಂದರಲ್ಲದೆ ಪೋಸ್ಟರ್ ಬಿಡುಗಡೆಗೊಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಸವರಾಜ ಪಾಟೀಲ್, ಸುರೇಶ್ ಪಾಟೀಲ್, ಶಿವಕುಮಾರ್, ಅತ್ತಹಳ್ಳಿ ದೇವರಾಜ್, ಶಿವರುದ್ರಪ್ಪ, ಗೋವಿಂದರಾಜ್ ಉಪಸ್ಥಿತರಿದ್ದರು. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: