ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಹಿರಿಯ ನಟ ಶಿವರಾಂ ಇನ್ನಿಲ್ಲ

ರಾಜ್ಯ(ಬೆಂಗಳೂರು),ಡಿ.4 :- ಚಂದನವನದ ಹಿರಿಯ ನಟ ಶಿವರಾಂ ಕಳೆದ ನಾಲ್ಕು ದಿನಗಳ ಹಿಂದೆ ಮನೆಯಲ್ಲಿಯೇ ಕೆಳಗೆ ಬಿದ್ದು ತಲೆಗೆ ತೀವ್ರವಾದ ಗಾಯ ಮಾಡಿಕೊಂಡು ಗಂಭೀರ ಸ್ಥಿತಿಗೆ ತಲುಪಿದ್ದರು,ಬೆಂಗಳೂರಿನ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಹಲವು ದಶಕಗಳಿಂದ ಸೇವೆ ಮಾಡುತ್ತ ಬಂದಿದ್ದ ಹಿರಿಯ ನಟ ಶಿವರಾಂ ಇಂದು ನಮ್ಮನ್ನು ಅಗಲಿದ್ದಾರೆ. ಕಳೆದ ಒಂದು ವಾರದಲ್ಲಿ ಒಂದು ಚಿಕ್ಕ ಅಪಾಘಾತವಾಗಿತ್ತು ಆಗ ಮನೆಯಲ್ಲಿಯೇ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದರು ಆದರೆ ನಾಲ್ಕು ದಿನಗಳ ಹಿಂದೆ ಮನೆಯಲ್ಲಿ ಅಯ್ಯಪ್ಪನ ಪೂಜೆ ಮಾಡಲು ಹೋಗಿ ಕೆಳಗೆ ಬಿದ್ದು ತಲೆಗೆ ತೀವ್ರವಾದ ಪೆಟ್ಟು ಬಿದ್ದಿತ್ತು. ಮೂರು ದಿನಗಳಿಂದ ಅವರನ್ನು ಬೆಂಗಳೂರಿನ ಪ್ರಶಾಂತ್ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ದುರಾದೃಷ್ಠ ಚಿಕಿತ್ಸೆ ಫಲಕಾರಿಯಾಗದೆ ಇಂದು ನಮ್ಮನ್ನು ಶಿವರಾಮ್ ಅಗಲಿದ್ದಾರೆ . ಶಿವರಾಮ್ ಅವರ ಮಗ ರವಿಶಂಕರ್ ಮಾಧ್ಯಮಗಳ ಮೂಲಕ ನಿಧನದ ಸುದ್ದಿಯನ್ನು ತಿಳಿಸಿದ್ದಾರೆ.
ಅವರು ಸುಮಾರು 600 ಚಿತ್ರಗಳಲ್ಲಿ ನಟಿಸಿದ್ದರು. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಅವರಿ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಹಿರಿತೆರೆ ಹಾಗೂ ಕಿರಿತೆರೆ ಎರಡರಲ್ಲೂ ಶಿವರಾಂ ಸೈ ಎನಿಸಿಕೊಂಡಿದ್ದರು.
1938 ರಲ್ಲಿ ಚೂಡಸಂದ್ರ ಹಳ್ಳಿಯಲ್ಲಿ ಜನಿಸಿದ ಶಿವರಾಂ 6 ದಶಕಗಳ ಕಾಲ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಶಿವರಾಮಣ್ಣ ಅಂತಲೇ ಫೇಮಸ್ ಆಗಿದ್ದರು. ಪೋಷಕ ನಟನಾಗಿ ,ಹಾಸ್ಯನಟನಾಗಿ ಶಿವರಾಂ ಜನಮನ ಗೆದ್ದಿದ್ದರು. ನಿರ್ದೇಶಕ,ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ. ರಾಶಿಬ್ರದರ್ಸ್ ಸಂಸ್ಥೆಯಡಿ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ಪುಟ್ಟಣ್ಣ ಕಣಗಾಲ್ ಜತೆಯೂ ಶಿವರಾಂ ಕೆಲಸ ಮಾಡಿದ ಹಲವು ದಿಗ್ಗಜ ನಟರೊಂದಿಗೆ ತೆರೆಯನ್ನು ಹಂಚಿಕೊಂಡಿದ್ದಾರೆ.
ಅಂದಿನ ಮದ್ರಾಸ್ ಪ್ರಾಂತ್ಯದಲ್ಲಿದ್ದ ಚೂಡಸಂದ್ರ ಗ್ರಾಮದಲ್ಲಿ ಜನಿಸಿ ಪ್ರಾಥಮಿಕ ಶಿಕ್ಷಣ ಮುಗಿಸಿ ಬೆಂಗಳೂರಿಗೆ ಬಂದರು, ಶಿವರಾಂ ಸೋದರ ಟೈಪ್ ರೈಟಿಂಗ್ ಇನ್ಸಿಟಿಟ್ಯೂಟ್ ನಡೆಸುತ್ತಿದ್ದರು. ಗುಬ್ಬಿ ವೀರಣ್ಣ ಅವರ ನಾಟಕಗಳಿಂದ ಶಿವರಾಂ ಅವರು ತುಂಬಾನೇ ಪ್ರೇರಣೆಗೆ ಒಳಗಾಗಿದ್ದರು. ಅವರು ನಾಟಕಗಳಲ್ಲಿ ಬಣ್ಣ ಹಚ್ಚೋಕೆ ಆರಂಭಿಸಿದರು. ನಂತರ 1965 ರಲ್ಲಿ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಚಿತ್ರನಿರ್ಮಾಣದಲ್ಲಿ ಆಸಕ್ತಿ ಬೆಳಸಿಕೊಂಡಿದ್ದ ಶಿವರಾಂ ಗೆಜ್ಜೆಪೂಜೆ, ಉಪಾಸನೆ, ನಾನೊಬ್ಬ ಕಳ್ಳ ಮೊದಲಾದ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.
ಬೆರೆತ ಜೀವ, ಮಾವನ ಮಗಳು, ದುಡ್ಡೇ ದೊಡ್ಡಪ್ಪ, ಲಗ್ನಪತ್ರಿಕೆ, ಶರಪಂಜರ, ಮುಕ್ತಿ, ಭಲೇ ಅದೃಷ್ಟವೋ ಅದೃಷ್ಟ, ಸಿಪಾಯಿರಾಮು, ನಾಗರಹಾವು, ನಾ ಮೆಚ್ಚಿದ ಹುಡುಗಿ, ಹೃದಯ ಸಂಗಮ, ಕಿಲಾಡಿ ಕಿಟ್ಟು, ನಾನೊಬ್ಬ ಕಳ್ಳ, ಹಾಲು ಜೇನು, ಪಲ್ಲವಿ ಅನುಪಲ್ಲವಿ, ಮೋಜುಗಾರ ಸೊಗಸುಗಾರ, ಭಜರಂಗಿ, ಮೊದಲಾದ ಸಿನಿಮಾಗಳಲ್ಲಿ ಶಿವರಾಂ ನಟಿಸಿದ್ದು. ಮಕ್ಕಳ ಸೈನ್ಯ ಸೇರಿ ಅನೇಕ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ, 1980 ರಲ್ಲಿ ಡ್ರೈವರ್ ಹನುಮಂತು ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಇವರ ಸಾಧನೆಗೆ ಹಲವು ಪ್ರಶಸ್ತಿಗಳು ಕೂಡ ಸಂದಿವೆ.
ಹಿರಿ ತೆರೆ ಮಾತ್ರವಲ್ಲದೆ ಕಿರಿತೆರೆಯಲ್ಲೂ ಗೃಹಭಂಗ ಮತ್ತು ಬದುಕು ಎಂಬ ಧಾರವಾಹಿಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: