ಮೈಸೂರು

ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಸಾ.ರಾ.ಮಹೇಶ್ ಪುತ್ರ?

ಮೈಸೂರು,ಡಿ.4 : -ಮೈಸೂರಿನ ರಾಜಕಾರಣದಲ್ಲಿ ಇನ್ಮುಂದೆ ಜನಪ್ರತಿನಿಧಿಗಳ ಮಕ್ಕಳ ದರ್ಬಾರ್ ಶುರುವಾಗಲಿದೆ.
ಸಾಂಸ್ಕೃತಿಕ ನಗರಿ ಮೈಸೂರು ಇನ್ಮುಂದೆ ಕುಟುಂಬ ರಾಜಕಾರಣದ ಕೇಂದ್ರ ಬಿಂದುವಾಗುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡರ ಪುತ್ರರು ರಾಜಕೀಯಕ್ಕೆ ಎಂಟ್ರಿ ಕೊಟ್ಟಾಯ್ತು. ಇದೀಗ ಸಾ.ರಾ. ಮಹೇಶ್ ಪುತ್ರ ರಾಜಕೀಯಕ್ಕೆ ಕಾಲಿಡಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಹಣವಿದ್ದರೆ ಮಾತ್ರ ರಾಜಕೀಯ ಎಂಬುದು ಮತ್ತೊಮ್ಮೆ ಸಾಬೀತಾಗುತ್ತಿದೆ.
ಮಾಜಿ ಸಚಿವ ಸಾ.ರಾ.ಮಹೇಶ್ ಅವರಿಗೆ ಪುತ್ರ ಜಯಂತ್ ಉತ್ತರಾಧಿಕಾರಿ. ಹೀಗಾಗಿ ಮಗನನ್ನು ರಾಜಕೀಯಕ್ಕೆ ಕರೆತರಲು ಸಾ.ರಾ ಮಹೇಶ್ ಆಸಕ್ತಿ ಹೊಂದಿದ್ದಾರೆ, ಈಗಾಗಲೇ ಪುತ್ರ ಜಯಂತ್ ಜನರ ಸಂಪರ್ಕ ಸಾಧಿಸುವ ಪ್ರಯತ್ನದಲ್ಲಿದ್ದು, ಕೆ.ಆರ್.ನಗರ ಕ್ಷೇತ್ರದಾದ್ಯಂತ ಸಂಚರಿಸುತ್ತಿದ್ದಾರೆ.
ಕ್ಷೇತ್ರದ ಕ್ರಿಕೆಟ್, ವಾಲಿಬಾಲ್ ಪಂದ್ಯಾವಳಿ ಸೇರಿದಂತೆ ಹಲವು ಸಭೆ ಸಮಾರಂಭಗಳಲ್ಲಿ ಜಯಂತ್ ಭಾಗಿಯಾಗಿದ್ದಾರೆ. ಇನ್ನೆರಡು ಚುನಾವಣೆ ನಡೆಸಿ ನಂತರ ಮಗನಿಗೆ ಕ್ಷೇತ್ರ ಬಿಟ್ಟು ಕೊಡಲು ಸಾ.ರಾ. ಮಹೇಶ್ ಚಿಂತನೆ ನಡೆಸಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: