ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಇಹಲೋಕ ತ್ಯಜಿಸಿದ ಹಿರಿಯ ನಟ ಶಿವರಾಂ : ಗಣ್ಯರಿಂದ ಅಂತಿಮ ದರ್ಶನ

ರಾಜ್ಯ(ಬೆಂಗಳೂರು),ಡಿ.4 : – ಕನ್ನಡದ ಹಿರಿಯ ನಟ ಶಿವರಾಂ ನಿಧನರಾಗಿರುವ ಹಿನ್ನಲೆಯಲ್ಲಿ ರಾಜಕೀಯ ಗಣ್ಯರು ಮತ್ತು ಕನ್ನಡ ಚಿತ್ರರಂಗದ ಗಣ್ಯರು ಬಂದು ಶಿವರಾಂ ಅವರ ಪಾರ್ಥಿವ ಶರೀರ ದರ್ಶನವನ್ನು ಪಡೆಯುತ್ತಿದ್ದಾರೆ.
ಚಂದನವನದ ಹಿರಿಯ ಕಲಾವಿದ ಶಿವರಾಮ್ ಇನ್ನಿಲ್ಲ ಎಂದು ತಿಳಿದ ಕನ್ನಡನಾಡು ಸ್ತಬ್ಧವಾಗಿದೆ, ಶಿವರಾಮ್ ಅವರ ಅಂತ್ಯಕ್ರಿಯೆಯನ್ನು ಭಾನುವಾರ ಮಾಡುವುದಾಗಿ ಕುಟುಂಬವರು ತಿಳಿಸಿದ್ದಾರೆ.
ಶಿವರಾಮ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಬಂದ ಕಂದಾಯ ಸಚಿವ ಆರ್. ಅಶೋಕ್ ಮಾಧ್ಯಮದೊಂದಿಗೆ ಮಾತನಾಡಿ, ಕನ್ನಡ ಚಿತ್ರರಂಗದ ಹಿರಿಯ ನಟರು , ನಾಗರಹಾವು ಸಿನಿಮಾಗಳಿಂದ ಹಿಡಿದು ಇಲ್ಲಿಯವರೆಗೂ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೇಯೇ ಸ್ವಂತ ಲೈಬ್ರರಿ ಸ್ಥಾಪನೆ ಮಾಡಿದ್ದರು. ತುಂಬಾ ಸಂಭಾವಿತ ಎಂದು ಹೇಳಿದ್ದಾರೆ.
ಮೊನ್ನೆ ಪುನೀತ್ ಅವರನ್ನು ಕಳೆದುಕೊಂಡೆವು ಇಂದು ಶಿವರಾಮ್ ಅಂತಹ ಹಿರಿಯರನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಹಿರಿಯ ನಟ,ಪ್ರಣಯರಾಜ ಶ್ರೀನಾಥ್ ಶಿವರಾಮ್ ಅವರ ಅಂತಿಮ ದರ್ಶನ ಪಡೆದು ಮಾಧ್ಯಮದೊಂದಿಗೆ ಮಾತನಾಡಿ, ಕನ್ನಡ ಕಂಡ ಅಪ್ರತಿಮ ನಟ , ನನ್ನ ಒಳ್ಳೆಯ ಸ್ನೇಹಿತ, ಇಂದು ಅವನಿಲ್ಲ ಎಂಬ ನೋವು ತುಂಬ ಕಾಡುತ್ತಿದೆ. ನಮ್ಮಿಬ್ಬರ ಗೆಳೆತನದ ನೆನಪುಗಳು ಮಾತ್ರ ಇನ್ನೂ ಶಾಶ್ವತ ಎಂದು ಹೇಳಿದ್ದಾರೆ .
ನಟ ಶಿವ ರಾಜ್ ಕುಮಾರ್ , ನಟ ದುನಿಯಾ ವಿಜಯ್ , ಹಿರಿಯ ನಟ ನಾಗೇಶ್, ಗಾಯಕ ವಿಜಯ್ ಪ್ರಕಾಶ್ ಸೇರಿದಂತೆ ಹಲವು ಕನ್ನಡ ಚಿತ್ರರಂಗದ ಕಲಾವಿದರು ಬಂದು ಶಿವರಾಮ್ ಅವರ ಅಂತಿಮ ದರ್ಶನವನ್ನು ಪಡೆಯುತ್ತಿದ್ದಾರೆ, ಹಾಗೂ ಅಭಿಮಾನಿಗಳ ದಂಡು ಅವರ ಅಂತಿಮ ದರ್ಶನ ಪಡೆಯಲು ಹರಿದು ಬರುತ್ತಿದೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: