ಮೈಸೂರು

ಹಳ್ಳಿಗಳಲ್ಲಿ ಬೀದಿ ದೀಪ ಹಾಳಾದರೆ ಬಲ್ಬ್ ಹಾಕುವುದು ನರೇಂದ್ರ ಮೋದಿ ಸರ್ಕಾರ : ಸಂಸದ ಪ್ರತಾಪ್ ಸಿಂಹ

ಮೈಸೂರು,ಡಿ.6:-  ಗ್ರಾಮ ಪಂಚಾಯಿತಿಗಳು ನಡೆಯತ್ತಿರುವುದು ಮೋದಿ ಸರ್ಕಾರದಿಂದ. ಕರ್ನಾಟಕದಲ್ಲಿ ನಮ್ಮದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ನಾನು ಇದನ್ನು ಹೇಳುತ್ತಿದ್ದೇನೆ. ಹಳ್ಳಿಗಳಲ್ಲಿ ಬೀದಿ ದೀಪ ಹಾಳಾದರೆ ಬಲ್ಬ್ ಹಾಕುವುದು ನರೇಂದ್ರ ಮೋದಿ ಸರ್ಕಾರ. ಜಲ ಜೀವನ್ ಮಿಷನ್ ಮೂಲಕ ಮನೆಗಳಿಗೆ ನೀರು ಕೊಡುತ್ತಿರುವುದು ಮೋದಿ ಸರ್ಕಾರ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

ನಗರದ ರಾಜೇಂದ್ರ ಕಲಾಮಂದಿರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಗಳ ಅಭ್ಯುದಯಕ್ಕೆ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸಿದರು.

ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎನ್.ಮಹೇಶ್, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್, ನಗರಾಧ್ಯಕ್ಷ ಶ್ರೀವತ್ಸ, ಮೇಯರ್ ಸುನಂದಾ ಫಾಲನೇತ್ರ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಸಮಾವೇಶದಲ್ಲಿ ಭಾಗಿಯಾಗಿದ್ದರು.

Leave a Reply

comments

Related Articles

error: