ದೇಶಪ್ರಮುಖ ಸುದ್ದಿ

ದಿನದಿಂದ ದಿನಕ್ಕೆ ಏರುತ್ತಿದೆ ಒಮಿಕ್ರಾನ್ ಪ್ರಕರಣ : ದೇಶದಲ್ಲಿ 21ಕ್ಕೇರಿಕೆ

ದೇಶ(ನವದೆಹಲಿ),ಡಿ.6:- ದೇಶದಲ್ಲಿ ಕೊರೊನಾ ವೈರಸ್‌ ನ ಹೊಸ ರೂಪಾಂತರವಾದ ಒಮಿಕ್ರಾನ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ನಿನ್ನೆ 17 ಒಮಿಕ್ರಾನ್ ಪ್ರಕರಣಗಳು ದಾಖಲಾಗಿದ್ದವು, ನಂತರ ಒಟ್ಟು ಸಂಖ್ಯೆ ಈಗ 21 ಕ್ಕೆ ಏರಿದೆ. ಭಾನುವಾರ ದಾಖಲಾದ 17 ಪ್ರಕರಣಗಳಲ್ಲಿ ರಾಜಸ್ಥಾನದ ರಾಜಧಾನಿ ಜೈಪುರದಿಂದ 9, ಮಹಾರಾಷ್ಟ್ರದ ಪುಣೆಯಿಂದ 7 ಮತ್ತು ದೆಹಲಿಯಲ್ಲಿ ಒಂದು ಪ್ರಕರಣಗಳು ದಾಖಲಾಗಿವೆ. ರಾಜಸ್ಥಾನದ ವೈದ್ಯಕೀಯ ಕಾರ್ಯದರ್ಶಿ ವೈಭವ್ ಗಲಾರಿಯಾ ಅವರು ಸೋಂಕಿತರ ಜೀನೋಮ್ ಅನುಕ್ರಮವು ಒಂಭತ್ತು ಜನರಿಗೆ ಕೊರೋನ ವೈರಸ್‌ ನ ಹೊಸ ರೂಪವಾದ ಒಮಿಕ್ರಾನ್‌ ನಿಂದ ಸೋಂಕಿಗೆ ಒಳಗಾಗಿರುವುದನ್ನು ದೃಢಪಡಿಸಿದೆ ಎಂದು ಹೇಳಿದ್ದಾರೆ.
ಮಾಹಿತಿಯ ಪ್ರಕಾರ ದಾಖಲಾದ ಪ್ರಕರಣಗಳಲ್ಲಿ, ಹೆಚ್ಚಿನ ಜನರು ಇತ್ತೀಚೆಗೆ ಆಫ್ರಿಕನ್ ದೇಶಗಳಿಂದ ಬಂದವರು ಅಥವಾ ಅಂತಹ ಜನರೊಂದಿಗೆ ಸಂಪರ್ಕಕ್ಕೆ ಬಂದವರು ಎಂಬುದು ಕಂಡುಬಂದಿದೆ. ದೇಶದಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಕರ್ನಾಟಕದಲ್ಲಿ ಕಂಡುಬಂದಿದ್ದು, ನಂತರ ದೆಹಲಿ ಸೇರಿದಂತೆ 5 ರಾಜ್ಯಗಳಲ್ಲಿ ರೂಪಾಂತರಗಳ ಪ್ರಕರಣಗಳು ದಾಖಲಾಗಿವೆ.
ರಾಜಸ್ಥಾನದಲ್ಲಿ ಒಂಭತ್ತು ಪ್ರಕರಣಗಳು, ಮಹಾರಾಷ್ಟ್ರದಲ್ಲಿ ಎಂಟು ಪ್ರಕರಣಗಳು, ಕರ್ನಾಟಕದಲ್ಲಿ ಎರಡು ಪ್ರಕರಣಗಳು, ಗುಜರಾತ್ ನಲ್ಲಿ ಒಂದು ಪ್ರಕರಣ, ದೆಹಲಿಯಲ್ಲಿ ಒಂದು ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: