ಮೈಸೂರು

ಟಿಬೆಟ್ ಕ್ಯಾಂಪ್ ನಲ್ಲಿ ಕಾಡಾನೆ ಪ್ರತ್ಯಕ್ಷ

ಮೈಸೂರು,ಡಿ.6:- ಮೈಸೂರು ಜಿಲ್ಲೆಯ ಹುಣಸೂರು   ತಾಲೂಕಿನ ವೀರನಹೊಸಹಳ್ಳಿ ಟಿಬೆಟ್ ಕ್ಯಾಂಪ್‌ ನಲ್ಲಿ   ಕಾಡಾನೆ ಪ್ರತ್ಯಕ್ಷವಾಗಿದೆ.

ಕಾಡಿನಿಂದ ನಾಡಿಗೆ ಬಂದ ಕಾಡಾನೆಯನ್ನು ಓಡಿಸಲು ಯುವಕನೋರ್ವ   ಪಂಜು ಹಿಡಿದು ಸ್ಥಳಕ್ಕೆ ತೆರಳಿದ್ದು,  ಈ ವೇಳೆ ಆನೆ ತಿರುಗಿ ಬಿದ್ದಿದ್ದು ಯುವಕನನ್ನು ಅಟ್ಟಿಸಿಕೊಂಡು ಬಂದಿದೆ.  ಪಂಜನ್ನು ಬಿಸಾಡಿ ಯುವಕ ಓಡಿ ಬಚಾವಾಗಿದ್ದಾನೆ. ಆನೆ ಕೋಪದಿಂದ ಜಮೀನಿಗೆ ಹಾಕಿದ್ದ ಬೇಲಿ ಕಂಬವನ್ನು  ಕಿತ್ತೊಗೆದಿದೆ.  ಮೊಬೈಲ್‌ ನಲ್ಲಿ ವಿಡಿಯೋ ಮಾಡುತ್ತಿದ್ದವರನ್ನು ಅಟ್ಟಾಡಿಸಿದೆ.

ಕಾಡಿನಿಂದ ನಾಡಿಗೆ ಬಂದು ಆತಂಕ ಸೃಷ್ಟಿಸಿದ್ದ ಒಂಟಿ ಸಲಗವನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ನಿನ್ನೆ ಬೆಳಿಗ್ಗೆಯಿಂದ ಸಂಜೆವರೆಗೂ ಕಾರ್ಯಾಚರಣೆ ನಡೆಸಿ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹುಣಸೂರು ತಾಲೂಕು ವೀರನಹೊಸಳ್ಳಿಯ ಟಿಬೆಟ್ ಕ್ಯಾಂಪ್ ನಲ್ಲಿ ಕಾರ್ಯಾಚರಣೆ ನಡೆದಿದೆ.

ಜಮೀನಿನಲ್ಲಿ ನಿರ್ಮಿಸಲಾಗಿದ್ದ ಶೆಡ್ ಗಳು ಕಾಡಾನೆ ದಾಳಿಗೆ ನಾಶವಾಗಿದೆ. ನಂತರ ವಿದ್ಯುತ್ ಕಂಬವನ್ನ ಧ್ವಂಸ ಮಾಡಿದೆ. ಸಂಜೆ ಜನ ಕಡಿಮೆಯಾದ ನಂತರ ಕಾರ್ಯಾಚರಣೆ ನಡೆಸಿ
ಆನೆಯನ್ನು ಕಾಡಿಗೆ ವಾಪಸ್ಸು ಕಳುಹಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: