ಮೈಸೂರು

ರೈತ ಸಂಘದ ಮಾಸಿಕ ಸಭೆ

ಮೈಸೂರು,ಡಿ.6:-  ಮೈಸೂರು ತಾಲೂಕು ರೈತ ಸಂಘದ ಮಾಸಿಕ  ಸಭೆಯು ನಿನ್ನೆ  ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರ ಕಚೇರಿಯಲ್ಲಿ   ಮೈಸೂರು ತಾಲೂಕು ಗೌರವಾಧ್ಯಕ್ಷರಾದ ಮೈಸೂರ ನಾಗನಹಳ್ಳಿ ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಭೆಯಲ್ಲಿ ತಾಲೂಕು ಅಧ್ಯಕ್ಷರಾದ ಆನಂದೂರು ಪ್ರಭಾಕರ್ ಮತ್ತು ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ತಾಲೂಕಿನಲ್ಲಿ ಸಂಘಟನೆಯ ಬಗ್ಗೆ ಹೆಚ್ಚು ಒತ್ತು ಕೊಡಬೇಕೆಂದು ಸಲಹೆ ನೀಡಿದರು. ಅನೇಕ ವಿಚಾರವನ್ನು ಚರ್ಚೆ ಮಾಡಲಾಯಿತು. ತಾಲೂಕಿನ ಬೇರೆ ಸಮಸ್ಯೆಗಳಿಗೆ ಸ್ಪಂದಿಸಲು ಮತ್ತು ಮುಂದಿನ ಸಭೆಯನ್ನು ಮುಂದಿನ ತಿಂಗಳು ಮೊದಲನೇ ಭಾನುವಾರದಂದು ಸಭೆಯನ್ನು ನಡೆಸಲು ತೀರ್ಮಾನಿಸಲಾಯಿತು.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: