ಕ್ರೀಡೆದೇಶಪ್ರಮುಖ ಸುದ್ದಿ

ಜಯಂತ್ ಯಾದವ್ ಅವರ ಅದ್ಭುತ ಬೌಲಿಂಗ್ ಒಂದೇ ಓವರ್‌ನಲ್ಲಿ 2 ವಿಕೆಟ್ : ಪಂದ್ಯದಲ್ಲಿ ಹಿಡಿತ ಸಾಧಿಸಿದ ಟೀಂ ಇಂಡಿಯಾ

ದೇಶ(ನವದೆಹಲಿ),ಡಿ.6:- ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಸರಣಿಯ ಎರಡನೇ ಮತ್ತು ಕೊನೆಯ ಪಂದ್ಯದಲ್ಲಿ ಮೂರನೇ ದಿನ ನ್ಯೂಜಿಲೆಂಡ್ ತಂಡ 5 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿದೆ.
ನ್ಯೂಜಿಲೆಂಡ್‌ ಗೆ ಭಾರತ 540 ರನ್‌ ಗಳ ಬೃಹತ್ ಗುರಿ ನೀಡಿದೆ. ಭಾರತ ತಂಡ ಈ ಪಂದ್ಯಕ್ಕೆ ಕುಣಿಕೆ ಬಿಗಿಗೊಳಿಸಿದೆ. ನಾಲ್ಕನೇ ದಿನದ ಆಟ ಆರಂಭವಾಗಿದೆ.
ನ್ಯೂಜಿಲೆಂಡ್‌ಗೆ ಮತ್ತೊಂದು ಪೆಟ್ಟು ನೀಡಿದ ಜಯಂತ್ ಯಾದವ್ ಅವರು 18 ರನ್‌ ಗಳ ವೈಯುಕ್ತಿಕ ಸ್ಕೋರ್‌ ನಲ್ಲಿ ಚೇತೇಶ್ವರ ಪೂಜಾರ ಅವರ ಕೈನಲ್ಲಿ ಕ್ಯಾಚ್ ಮಾಡಿಸಿದರು.

ನಾಲ್ಕನೇ ದಿನದ ಆರಂಭದಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ ಜಯಂತ್ ಯಾದವ್ ಮೂವರು ನ್ಯೂಜಿಲೆಂಡ್ ಬ್ಯಾಟ್ಸ್ ಮನ್ ಗಳನ್ನು ಪೆವಿಲಿಯನ್ ಗೆ ಕಳುಹಿಸಿದರು. ಈ ಮೂಲಕ ಟೀಂ ಇಂಡಿಯಾ ಗೆಲುವಿಗೆ ಇನ್ನೆರಡು ಹೆಜ್ಜೆ ಬಾಕಿ ಇದೆ. ರಚಿನ್ ರವೀಂದ್ರ ನಂತರ, ಜಯಂತ್ ಯಾದವ್ ತಮ್ಮ ಒಂದು ಓವರ್‌ ನಲ್ಲಿ ಖಾತೆ ತೆರೆಯದೆ ಕೈಲ್ ಜೇಮಿಸನ್ ಮತ್ತು ಟಿಮ್ ಸೌಥಿ ಅವರನ್ನು ಪೆವಿಲಿಯನ್ ಹಾದಿ ತೋರಿಸಿದರು. 54 ಓವರ್‌ಗಳಲ್ಲಿ ನ್ಯೂಜಿಲೆಂಡ್ ಸ್ಕೋರ್ 165/8. ಜಯಂತ್ ಯಾದವ್ ಇಂದು ಅತ್ಯುತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಮ್ಮೆ ಬೌಲಿಂಗ್ ಮಾಡಲು ಬಂದ ಅವರು ವಿಲಿಯಂ ಸೋಮರ್‌ ವಿಲ್ಲೆ ಅವರನ್ನು ಪೆವಿಲಿಯನ್‌ಗೆ ಕಳುಹಿಸಿ ನ್ಯೂಜಿಲೆಂಡ್‌ಗೆ 9ನೇ ಹೊಡೆತ ನೀಡಿದರು. ಇಂದು, ಆರಂಭಿಕ ಓವರ್‌ ನಲ್ಲಿ, ಅವರು ಇದುವರೆಗೆ 4 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದೀಗ ಟೀಂ ಇಂಡಿಯಾ ಗೆಲುವಿಗೆ ಒಂದು ಹೆಜ್ಜೆ ದೂರದಲ್ಲಿದೆ. 56 ಓವರ್‌ ಗಳಲ್ಲಿ ನ್ಯೂಜಿಲೆಂಡ್ ಸ್ಕೋರ್ 167/9. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: