ದೇಶಪ್ರಮುಖ ಸುದ್ದಿ

ಮಹಾಪರಿನಿರ್ವಾಣ ದಿನ : ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಗಣ್ಯರಿಂದ ಶ್ರದ್ಧಾಂಜಲಿ ಅರ್ಪಣೆ

ದೇಶ(ನವದೆಹಲಿ),ಡಿ.6:- ಇಂದು ಭಾರತೀಯ ಸಂವಿಧಾನದ ಯ ಶಿಲ್ಪಿ ಡಾ. ಭೀಮರಾವ್ ರಾಮ್‌ ಜಿ ಅಂಬೇಡ್ಕರ್ (ಬಾಬಾಸಾಹೇಬ್ ಅಂಬೇಡ್ಕರ್) ಅವರ 65 ನೇ ಪುಣ್ಯತಿಥಿ. ಅವರು 1956 ರಲ್ಲಿ ಡಿಸೆಂಬರ್ 6 ರಂದು ನಿಧನರಾದರು. ಅವರನ್ನು ಭಾರತಿ ಬಹುಜ್ಞ, ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ರಾಜಕಾರಣಿ ಮತ್ತು ಸಮಾಜ ಸುಧಾರಕ ಎಂದು ಕರೆಯಲಾಗುತ್ತಿತ್ತು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ದಲಿತ ಬೌದ್ಧ ಚಳುವಳಿಯನ್ನು ಪ್ರೇರೇಪಿಸಿದರು. ಅಸ್ಪೃಶ್ಯರ ವಿರುದ್ಧ ಸಾಮಾಜಿಕ ತಾರತಮ್ಯದ ವಿರುದ್ಧ ದೊಡ್ಡ ಅಭಿಯಾನವನ್ನು ಪ್ರಾರಂಭಿಸಿದರು. ಕಾರ್ಮಿಕರಿಂದ ರೈತರು ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದರು. ಅಂಬೇಡ್ಕರ್ ಅವರು ತಮ್ಮ ಇಡೀ ಜೀವನವನ್ನು ಬಡವರು, ದೀನದಲಿತರು ಮತ್ತು ಹಿಂದುಳಿದ ವರ್ಗದವರಿಗಾಗಿ ಜಾತೀಯತೆಯ ನಿರ್ಮೂಲನೆಗೆ ಮುಡಿಪಾಗಿಟ್ಟರು. ಈ ಕಾರಣಕ್ಕಾಗಿ ಬಾಬಾ ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಹೇಲಲಾಗುತ್ತಿದೆ.
ಈ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ, ಮಲ್ಲಿಕಾರ್ಜುನ ಖರ್ಗೆ, ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ಹಣ್ಯರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: