ಮೈಸೂರು

ಪವರ್ ಸ್ಟಾರ್ ಅಗಲಿಕೆಯ ನೋವಿನಲ್ಲಿ ಕುಡಿತಕ್ಕೆ ದಾಸನಾಗಿ ಅಭಿಮಾನಿ ಸಾವು : ನೇತ್ರದಾನ

ಮೈಸೂರು,ಡಿ.6:- ದಿ.ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕಟ್ಟಾ ಅಭಿಮಾನಿಯೋರ್ವ  ಪುನೀತ್   ಅಗಲಿಕೆಯ ನೋವನ್ನು ಸಹಿಸಲಾರದೇ ಕುಡಿತಕ್ಕೆ ದಾಸನಾಗಿ ಸಾವನ್ನಪ್ಪಿದ ಘಟನೆ ಮೈಸೂರಿನ ವಿದ್ಯಾರಣ್ಯಪುರಂ ಕನಕಗಿರಿಯಲ್ಲಿ ನಡೆದಿದೆ.

ಮೃತನನ್ನು ಕನಕಗಿರಿ ನಿವಾಸಿ ಹರೀಶ್ ಎಂದು ಹೇಳಲಾಗಿದೆ.  ಈತ  ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಪುನೀತ್ ಮೈಸೂರಿಗೆ ಬಂದಾಗ ಅವರ ಜೊತೆ ಫೋಟೋ ಕೂಡ ತೆಗೆಸಿಕೊಂಡಿದ್ದ.  ಪುನೀತ್ ಅವರ ಅಕಾಲಿಕ ನಿಧನ ಹರೀಶ್ ನನ್ನು ಕಂಗೆಡಿಸಿತ್ತು. ಪುನೀತ್ ಸಾವನ್ನಪ್ಪಿದ ದಿನದಿಂದಲೇ ಹರೀಶ್ ವಿಪರೀತ ಮದ್ಯಸೇವಿಸಲು ಆರಂಭಿಸಿದ್ದ. ಇದರಿಂದ ಅನಾರೋಗ್ಯಕ್ಕೊಳಗಾಗಿದ್ದ. ನಿನ್ನೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಮನೆಯ ಮಗನನ್ನು ಕಳೆದುಕೊಂಡ ನೋವಿನಲ್ಲಿಯೂ ಹರೀಶ್ ನೇತ್ರಗಳನ್ನು ಮನೆಯವರು ದಾನಮಾಡುವ ಮೂಲಕ  ಸಾವಿನಲ್ಲೂ ಸಾರ್ಥಕತೆ ಕಾಣುವಂತೆ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: