ಕ್ರೀಡೆದೇಶಪ್ರಮುಖ ಸುದ್ದಿ

ಭಾರತ ವಿರುದ್ಧದ ಸರಣಿಯ ಪಟ್ಟಿ ಬಿಡುಗಡೆ ಮಾಡಿದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ

ದೇಶ(ನವದೆಹಲಿ),ಡಿ.6:- ಭಾರತ ವಿರುದ್ಧದ ಸರಣಿಯ ಪಟ್ಟಿಯನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿದೆ. ಡಿಸೆಂಬರ್ 26 ರಿಂದ ಜನವರಿ 23 ರವರೆಗೆ 3 ಟೆಸ್ಟ್ ಮತ್ತು 3 ಏಕದಿನ ಪಂದ್ಯಗಳು ನಡೆಯಲಿವೆ.
ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 26 ರಿಂದ 30 ರವರೆಗೆ ಸೆಂಚೂರಿಯನ್ ನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯ ಜನವರಿ 3 ರಿಂದ 7 ರವರೆಗೆ ಜೋಹಾನ್ಸ್‌ ಬರ್ಗ್‌ ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ. ಅದೇ ಸಮಯದಲ್ಲಿ, ಜನವರಿ 11 ರಿಂದ 15 ರವರೆಗೆ ಕೇಪ್ ಟೌನ್‌ನಲ್ಲಿ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ.
ಭಾರತ ವಿರುದ್ಧದ ಮೂರು ಏಕದಿನ ಪಂದ್ಯಗಳು ಜನವರಿ 19, 21 ಮತ್ತು 23 ರಂದು ಪರ್ಲ್ ಮತ್ತು ಕೇಪ್ ಟೌನ್‌ ನಲ್ಲಿ ನಡೆಯಲಿವೆ. ಮೊದಲ ಎರಡು ಏಕದಿನ ಪಂದ್ಯಗಳು ಪರ್ಲ್‌ನಲ್ಲಿ ನಡೆಯಲಿದ್ದು, ಮೂರನೇ ಪಂದ್ಯ ಕೇಪ್‌ ಟೌನ್‌ ನಲ್ಲಿ ನಡೆಯಲಿದೆ. ಭಾರತ ತಂಡ 16 ಅಥವಾ 17 ರಂದು ದಕ್ಷಿಣ ಆಫ್ರಿಕಾಕ್ಕೆ ಬಂದಿಳಿಯಬಹುದು ಎನ್ನಲಾಗಿದೆ.

ಅದೇ ವೇಳೆ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಕ್ರಿಕೆಟ್ ತಂಡದ ಆಯ್ಕೆಗಾಗಿ ರಾಷ್ಟ್ರೀಯ ಆಯ್ಕೆಗಾರರು ಸಭೆ ನಡೆಸಲಿದ್ದು,ಏಕದಿನ ಮಾದರಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಜೊತೆಗೆ ಟೆಸ್ಟ್ ರೂಪದಲ್ಲಿ ಅಜಿಂಕ್ಯ ರಹಾನೆ ಅವರ ಉಪನಾಯಕ ಹುದ್ದೆ ಕುರಿತು ಚರ್ಚೆ ನಡೆಯಲಿದೆ. ಇದರೊಂದಿಗೆ 100 ಟೆಸ್ಟ್ ಪಂದ್ಯಗಳನ್ನಾಡಿರುವ ಇಶಾಂತ್ ಶರ್ಮಾ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರುವುದಲ್ಲದೆ, ಅನುಭವಿ ಆರಂಭಿಕ ಶಿಖರ್ ಧವನ್ ಏಕದಿನ ತಂಡಕ್ಕೆ ಮರಳಿರುವುದು ಕೂಡ ಈ ಆಯ್ಕೆ ಸಭೆಯಲ್ಲಿ ಪ್ರಮುಖ ವಿಚಾರವಾಗಲಿದೆ.
ಆಯ್ಕೆ ಸಮಿತಿಯ ಅಧ್ಯಕ್ಷ ಚೇತನ್ ಶರ್ಮಾ, ಅಭಯ್ ಕುರುವಿಲ್ಲಾ ಮತ್ತು ಸುನಿಲ್ ಜೋಶಿ ಅವರು ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರೊಂದಿಗೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಇದು ಭಾರತೀಯ ಕ್ರಿಕೆಟ್‌ಗೆ ದೂರಗಾಮಿ ಪರಿಣಾಮಗಳನ್ನು ಬೀರಬಹುದು.
ಭಾರತವು ದಕ್ಷಿಣ ಆಫ್ರಿಕಾದಲ್ಲಿ ಮೂರು ಏಕದಿನ ಪಂದ್ಯ ಗಳನ್ನು ಆಡಬೇಕಿದೆ. ಈಗ ದೇಶಕ್ಕೆ ವೈಟ್-ಬಾಲ್ (ಸೀಮಿತ ಓವರ್) ಸ್ವರೂಪದಲ್ಲಿ ಇಬ್ಬರು ನಾಯಕರುಗಳ ಅಗತ್ಯವಿದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ, ಇದು ತಂಡದಲ್ಲಿ ಘರ್ಷಣೆಗೆ ಕಾರಣವಾಗಬಹುದು. ರೋಹಿತ್ ಶರ್ಮಾ ಈಗಾಗಲೇ ಟಿ20 ತಂಡದ ನಾಯಕರಾಗಿದ್ದು, 2023ರಲ್ಲಿ ನಡೆಯಲಿರುವ 50 ಓವರ್‌ ಗಳ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐನ ಸೀಮಿತ ಓವರ್‌ಗಳ ಮಾದರಿಯಲ್ಲಿ ನಾಯಕನನ್ನು ಹೊಂದುವ ಬಗ್ಗೆ ಚರ್ಚೆ ನಡೆಯುತ್ತಿದೆ. (ಏಜೆನ್ಸಿಸ್, ಎಸ್.ಎಚ್)

Leave a Reply

comments

Related Articles

error: