ಕರ್ನಾಟಕಪ್ರಮುಖ ಸುದ್ದಿಮೈಸೂರು

ಬಿಜೆಪಿ ಗೆ ಯಾವ ಪಕ್ಷದ ಮೈತ್ರಿಯೂ ಅನಿವಾರ್ಯ ವಲ್ಲ : ಸಂಸದ ಶ್ರೀನಿವಾಸ ಪ್ರಸಾದ್

ಮೈಸೂರು,ಡಿ.7 :-ರಾಜ್ಯ ದಲ್ಲಿ ಬಿಜೆಪಿ ಯತ್ತ ಒಲವಿದೆ . ಬಿಜೆಪಿ ಗೆ ಯಾವ ಪಕ್ಷದ ಮೈತ್ರಿಯೂ ಅನಿವಾರ್ಯ ವಲ್ಲ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

ಮೈಸೂರು-ಚಾಮರಾಜನಗರ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆ 2021ರ ಮತದಾನಕ್ಕೆ ಮೂರು ದಿನ ಮಾತ್ರ ಬಾಕಿ ಇದ್ದು ಚಾಮರಾಜನಗರ ಸಂಸದ ವಿ ಶ್ರೀನಿವಾಸಪ್ರಸಾದ್
ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಅನಾರೋಗ್ಯದ ಹಿನ್ನೆಲೆಯಲ್ಲಿ ಎಲ್ಲಿಯೂ ಪ್ರಚಾರಕ್ಕೆ ತೆರಳಲು ನನಗೆ ಸಾಧ್ಯವಾಗಿಲ್ಲ. ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ವ್ಯಾಪಕ ಪ್ರಚಾರ ಮಾಡಿದ್ದಾರೆ. ಆರೋಗ್ಯ ಸರಿಯಿಲ್ಲದ ಕಾರಣ ನಾನು ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದರು.
ಮೊದಲೆಲ್ಲಾ ಕಾಂಗ್ರೆಸ್ ಜೆಡಿಎಸ್ ನಡುವೆ ಮಾತ್ರ ನೇರ ಸ್ಪರ್ಧೆ ಏರ್ಪಡುತ್ತಿತ್ತು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಪ್ರಬಲವಾಗಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದರು.

ಸ್ಪರ್ಧೆ ತೀವ್ರವಾಗಿದ್ದು, ಮೊದಲ ಪ್ರಾಶಸ್ತ್ರ ಮತದಲ್ಲೇ ಬಿಜೆಪಿ ಗೆಲ್ಲಲ್ಲಿದೆ.ಮೈಸೂರು- ಚಾಮರಾಜನಗರ ಭಾಗದಲ್ಲಿ ಬಿಜೆಪಿ ಹೆಚ್ಚು ಶಕ್ತಿಯುತವಾಗಿದೆ ಎಂದರು.  ಮೊದಲು ಕಾಂಗ್ರೆಸ್ ಮತ್ತು ಜನತಾ ಪಕ್ಷ ಮಾತ್ರ ಇತ್ತು. ಇದೀಗ ಬಿಜೆಪಿ ಪಕ್ಷ ಸ್ಟ್ರಾಂಗ್ ಆದ ಕಾರಣ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಈ ಚುನಾವಣೆಯಲ್ಲಿ ನಾವೇ ಗೆದ್ದೆ ಗೆಲ್ಲುತ್ತೇವೆ ಎಂಬ ವಿಶ್ವಾಸ ಇದೆ. ಕಳೆದ ಬಾರಿ ಕೆಲವೇ ಮತಗಳ ಅಂತರದಿಂದ ಸೋತಿದ್ರು.
ಈ ಬಾರಿ ಗೆಲ್ಲುವ ಆತ್ಮ ವಿಶ್ವಾಸ ನಮಗಿದೆ ಎಂದರು.
ಸಿದ್ದರಾಮಯ್ಯ – ಜಿಟಿದೇವೇಗೌಡ ಒಂದಾಗಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಇದು ಒಂದು ರೀತಿಯ ನಗೆ ಪಾಟಲಿಗೀಡಾಗಿದೆ. ಇದೇ ಜಿ.ಟಿ ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಪರ್ವ ಮಾಡಿದ್ರು. ಜನತಾ ಪರಿವಾರ ಕಟ್ತಿನಿ ಅಂತ ಓಡಾಡಿದ್ರು. ಇದೇ ಸಿದ್ದರಾಮಯ್ಯ, ರಾತ್ರೋರಾತ್ರಿ ಊರು ಬಿಟ್ಟು ಬದಾಮಿಗೆ ಹೋಗಿ ನಿಂತ್ರು.
ಈ ವೇಳೆ 35 ಸಾವಿರ ಮತಗಳಿಂದ ಸೋತ್ರು ಸಿದ್ದರಾಮಯ್ಯಗೆ ಬುದ್ದಿ ಬಂದಿಲ್ಲ. ಸಿಎಂ ಆಗಿ ನೀವೆ ಹೆದರಿಕೊಂಡು ಓಡಿಹೋದ್ರೆ ಹೇಗೆ? ವೀರಾವೇಷದ ಮಾತಗಳನ್ನು ಆಡಿದ್ರಿ, ಆದ್ರೆ ಹೆದರಿ ಬದಾಮಿಗೆ ಹೋದ್ರಿ ಎಂದು ವ್ಯಂಗ್ಯ ವಾಡಿದರು.

ಅಧಿಕಾರಕ್ಕಾಗಿ ಪಕ್ಷದ ಸ್ಥಾನಕ್ಕೆ ರಾಜೀನಾಮೆ‌ ನೀಡಿ ಇದೀಗ ನಾನೇ ಸಿಎಂ ಎನ್ನುತ್ತಿದ್ದಾರೆ. ಏನೋ ಚುನಾವಣೆಯಲ್ಲಿ ಗೆದ್ದು ಬಂದಿದ್ದೀರಾ. ಮೊದಲು ಅದನ್ನ ಉಳಿಸಿಕೊಳ್ಳಿ ಸಿದ್ದರಾಮಯ್ಯನವರೇ ಎಂದು ಸಲಹೆ ನೀಡಿದರು.
ಆರ್ ಎಸ್ ಎಸ್ ನ್ನು ವ್ಯಾಪಕವಾಗಿ ಟೀಕಿಸುತ್ತಿದ್ದ ಜೆಡಿಎಸ್ ಇದೀಗ ಬಿಜೆಪಿ ಜೊತೆ ಹೊಂದಾಣಿಕೆಗೆ ಮುಂದಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ ಎಚ್ ಡಿ ಕುಮಾರಸ್ವಾಮಿ ಬಿಜೆಪಿ ಬಗ್ಗೆ ಟೀಕೆ ಮಾಡುವುದು ಸರಿ. ತಮ್ಮ ಟೀಕೆಗೆ ಆರ್ ಎಸ್ ಎಸ್ ಬಳಸಿ ಕೊಳ್ಳುವುದು ಸರಿಯಲ್ಲ
ಆರ್ ಎಸ್ ಎಸ್ ಒಂದು ರಾಜಕೀಯ ಪಕ್ಷವಲ್ಲ. ಹೀಗಾಗಿ ಅದರ ಮೇಲೆ ರಾಜಕೀಯವಾಗಿ ಟೀಕೆ ಸಲ್ಲದು ಎಂದರು.

ಬಿಜೆಪಿ ಗೆ ಯಾವ ಪಕ್ಷದ ಮೈತ್ರಿಯೂ ಅನಿವಾರ್ಯ ವಲ್ಲ. ಬಿಜೆಪಿಗೆ ಯಾರ ಮೈತ್ರಿಯೂ ಬೇಕಾಗಿಲ್ಲ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿಯಿಂದ ಗೆದ್ದಿದ್ದು ಎಷ್ಟು ಸ್ಥಾನ ಗೊತ್ತಿದೆ. ಯಾರ ಮೈತ್ರಿಯೂ ಬಿಜೆಪಿ ಗೆ ಅಗತ್ಯವಿಲ್ಲ. ಅತಿ ಹೆಚ್ಚು ಗಳಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿದಿರೋ ದೊಡ್ಡ ಪಕ್ಷ ಬಿಜೆಪಿ ಎಂದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆ ಜೆಡಿಎಸ್ ಬೆಂಬಲದ ಅಗತ್ಯವಿಲ್ಲ. ಕೇವಲ ನಾಲ್ಕೈದು ಕ್ಷೇತ್ರಗಳಲ್ಲಿ ಜೆಡಿಸ್ ಬೆಂಬಲ ನೀಡಿದರೆ ಬಿಜೆಪಿ ಗೆ ಅನುಕೂಲ ಆಗಲಿದೆಯಷ್ಟೇ. ಹೈಕಮಾಂಡ್ ಮಟ್ಟದಲ್ಲಿ ಬೆಂಬಲ ಪಡೆಯುವ ವಿಚಾರ ನಿರ್ಧಾರವಾಗಲಿದೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: