ಕರ್ನಾಟಕಪ್ರಮುಖ ಸುದ್ದಿ

ಚಹಾ ಮಾರುವ ಹುಡುಗ ದೇಶದ ಪ್ರಧಾನಿಯಾಗುವ ಹಾಗೇ ಮಾಡಿದ್ದು ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದಿಂದ : ಸಿ.ಟಿ ರವಿ

ರಾಜ್ಯ(ಬೆಂಗಳೂರು),ಡಿ.07 : ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಇಂದು ಬೆಂಗಳೂರಿನಲ್ಲಿ ಅಖಿಲ ಭಾರತಿಯ ಅನುಸೂಚಿತ ಜಾತಿಮೋರ್ಚ ವತಿಯಿಂದ ಸುದ್ದಿಗೊಷ್ಠಿಯೊಂದನ್ನು ನಡೆಸಿದ್ದಾರೆ.  

ಸುದ್ದಿಗೊಷ್ಠಿಯಲ್ಲಿ  ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಮಾತನಾಡಿ, ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದಲ್ಲಿ ಕೊಟ್ಟಿರುವ ಸಮಾನ ಅವಕಾಶದಿಂದ ಚಹಾ ಮಾರುವ ಹುಡುಗ ದೇಶದ ಪ್ರಧಾನಿಯಾಗುವ ಹಾಗೇ ಮಾಡಿತು, ಸಾಮಾನ್ಯ ರೈತನ ಮಗನಾದ ನಾನು ನಾಲ್ಕು ಬಾರಿ ಶಾಸಕನಾಗಿ ಮಂತ್ರಿಯಾಗಲು ಸಾಧ್ಯವಾಯಿತು, ಈ ರೀತಿ ದೇಶದ ಪೂರ ಸಾವಿರಾರು ಜನರಿಗೆ ಸಂವಿಧಾನ ಕೊಟ್ಟ ಪ್ರಜಾಪ್ರಭುತ್ವ, ಪ್ರಜಾಪ್ರಭುತ್ವ ಕೊಟ್ಟ ಅವಕಾಶದಿಂದ ಜನರಲ್ಲಿ ಪರಿವರ್ತನೆ ತಂದುಕೊಳ್ಳಲು ದಾರಿಯಾಗಿದೆ ಎಂದು ಹೇಳಿದ್ದಾರೆ.

ನ.26 ರಂದು ಸಂವಿಧಾನ ದಿವಸ, ಆ ದಿನ ಸಂವಿಧಾನವನ್ನು ಕೊಟ್ಟ ದಿನ , ಸಂವಿಧಾನ ಅಂದರೆ ಅಂಬೇಡ್ಕರ್ ಅವರ ಹೆಸರು ಮೊದಲು ಧ್ವನಿಸುತ್ತದೆ ಎಂದು ಅದನ್ನು ಮರೆಮಾಚಲು ಮುಂದಾದವರು ಈ ಕಾಂಗ್ರೆಸ್ ನವರು. ಅಲ್ಲದೆ ಇತಿಹಾಸದಲ್ಲಿ ಮೂರು ದಶಕಗಳ ಹೆಚ್ಚು ಕಾಲ ಅಂಬೇಡ್ಕರ್ ಅವರ ಪ್ರತಿಭೆಗೆ , ಅವರ ಪರಂಪರೆಗೆ ಯಾವ ನಾಯ್ಯವನ್ನು ಕೊಡಬೇಕಿತ್ತೋ  ಆವತ್ತು ಆಡಳಿತದಲ್ಲಿ ಇದ್ದ ಕಾಂಗ್ರೆಸ್ ಪಾರ್ಟಿ ಕೊಡಲಿಲ್ಲ ಎಂಬುದು ದುಃಖದ ವಿಷಯ, ಮತ್ತು ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರಿಗೆ ರಾಜಕೀಯವಾಗಿ ಗೆದ್ದು ಮುಂದೆ ಬರಲು ಬಿಡದ ಈ ಕಾಂಗ್ರೆಸ್ ಪಾರ್ಟಿ ಇವತ್ತು ಕ್ಷಮೆಯಾಚಿಸ ಬೇಕು  ಎಂದು ಅಗ್ರಹಿಸಿದ್ದಾರೆ.

ಅಂಬೇಡ್ಕರ್ ಅವರು ಪಂಚಧಾಮಗಳನ್ನು ಪಂಚತೀರ್ಥ ಎಂದು ಅಂಬೇಡ್ಕರ್ ಅವರು ಹುಟ್ಟಿದ ದಿನ ಘೋಷಣೆ ಮಾಡಿ. ಅವರು ಹುಟ್ಟಿದ ಸ್ಥಳ ಮಾಹೆ, ಬ್ಯಾರಿಸ್ಟರ್ ಪದವಿ ಪಡೆಯುವ ಸಂದರ್ಭದಲ್ಲಿ ಲಂಡನ್ ನಲ್ಲಿ ವಾಸವಿದ್ದ ಮನೆಯನ್ನು ಗುರುತಿಸಿ ಅದನ್ನು ಸ್ಮಾರಕಾವಾಗಿ ಪರಿವರ್ತಿಸಿ , ಸಂವಿಧಾನ ಬರೆಯು ಸಂಧರ್ಭದಲ್ಲಿ ದೆಹಲಿ ಯಲ್ಲಿ ವಾಸವಿದ್ದ ಮನೆಯನ್ನು ಸ್ಮಾರಕಾವಾಗಿ ಪರಿವರ್ತಿಸಿ, ಕರ್ಮಭೂಮಿ ನಾಗಪೂರ ಮತ್ತು ಅಂತ್ಯ ಭೂಮಿ ಮುಂಬೈ ಈ ಐದು ಸ್ಥಳಗಳನ್ನು ಪಂಚಧಾಮ ಎಂದು ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಮಾಡಿದೆ ಎಂದು ತಿಳಿಸಿದ್ದಾರೆ.  

ಈ ವೇಳೆ  ಸಿದ್ದರಾಮಯ್ಯನವರು ಮತ್ತೆ ಬಾದಾಮಿ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತೆನೆ ಎಂಬುದಕ್ಕೆ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟೆ ವಿರೋಧ ವ್ಯಕ್ತ ಪಡಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿ , ಅದು ಅವರ ಪಕ್ಷದ ಅಂತಾರಿಕ ವಿಷಯ, ಪ್ರಶ್ನಾತೀತ ನಾಯಕ , ಭವಿಷ್ಯದ ಪ್ರಧಾನಿ ಸಿದ್ದರಾಮಯ್ಯ ಎಂದು ಎಲ್ಲರೂ ತುತ್ತೂರಿ ಊದುತಿದ್ದ ಕಾಲವಿತ್ತು, ಈಗ ಅವರಿಗೆ ಎಂಥ ದುರ್ದೈವ ಸ್ಥಿತಿಯಂದರೆ ಅವರಿಗೆ ಇರುವ ಕ್ಷೇತ್ರದಿಂದಲೇ ಅವರನ್ನು ಹೊಡಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ .

ಅವರ ಸ್ಥಿತಿ ಯಾಕೆ ಹೀಗೆ ಆಯಿತ್ತು. ನನ್ನ ಪ್ರಕಾಕ ಚಿಮ್ಮಕಟ್ಟಿಯವರಿಗೆ ಹೇಳಿಕೊಟ್ಟಿದ್ದಾರೆ ಅನಿಸುತ್ತದೆ, ಯಾಕೆಂದರೆ ಚಿಮ್ಮಕಟ್ಟಿ ಸ್ವಾಭವಿಕಾವಾಗಿ ಅವರು ಇಷ್ಟೊಂದು ಧೈರ್ಯ ಮಾಡಲ್ಲ ಎಂದು ಹೇಳಿ ಸಿದ್ದರಾಮಯ್ಯನವರಿಗೆ ಈ ಸ್ಥಿತಿ  ಬಾರಬರದಿತ್ತು ಎಂದು ಲೇವಡಿ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್ ಅವರ  ನಾಯಕತ್ವ ಬಗ್ಗೆ ಮಾತನಾಡಿ , ಅವರ ಪ್ರಕಾರ ರಾಜಕೀಯ ಎಂದರೆ ಗೂಂಡಗಿರಿ ಮಾಡಬೇಕು, ಏನಾದರೂ ಮೋಸ ಮಾಡಿ ದುಡ್ಡು ಮಾಡಿರುವ ವ್ಯಕ್ತಿಗಳು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸ ಬೇಕು ಎಂಬ ನಿಲುವುಗಳು ಅವರದು ಅದರೆ ನಮ್ಮ ಪಕ್ಷದಲ್ಲಿ ನಮ್ಮ ಬಿಜೆಪಿ ನಾಯಕರುಗಳು ಇರುವ ಕಾರ್ಯಕರ್ತರನ್ನು ಬೆಳಸಬೇಕು ಎಂಬುದು ನಮ್ಮ ನಿಲುವು , ಹಾಗಾಗೀ ಅವರದೇ ಬೇರೆ ನಿಲುವು ನಮ್ಮದೇ ಬೇರೆ ನಿಲುವು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಹರಿಹಾಯ್ದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಎಸ್ಸಿ ಮೋರ್ಚದ ರಾಜ್ಯಾಧ್ಯಕ್ಷರಾದ ಚಲವಾದಿ ನಾರಾಯಣ್ ಉಪಸ್ಥಿತರಿದ್ದರು. (ಎಸ್.ಎಂ, ಎಸ್.ಹೆಚ್)

Leave a Reply

comments

Related Articles

error: