ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಫೆ.24 ರಂದು ತೆರೆಯ ಮೇಲೆ

ರಾಜ್ಯ(ಬೆಂಗಳೂರು),ಡಿ.07 :  ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಬಿಡುಗಡೆಗೆ ಸಜ್ಜಾಗಿದ್ದು. ಚಿತ್ರತಂಡದಿಂದ ಈಗ ಫೆ.24 ರಂದು  ತೆರೆಗೆ ಬರಲಿದೆ ಎಂದು ಘೋಷಣೆಯನ್ನು ಸಹ ಮಾಡಿದ್ದು. ವಿಶ್ವಾದ್ಯಂತ ‘ವಿಕ್ರಾಂತ್ ರೋಣ’ತೆರೆಕಾಣಲಿದ್ದು, ಈ ವಿಚಾರವನ್ನು ಸೋಷಿಯಲ್ ವೀಡಿಯಾದ ಮೂಲಕ ಕಿಚ್ಚ ಸುದೀಪ್ ಮತ್ತು ಚಿತ್ರತಂಡ ತಿಳಿಸಿದೆ.

‘ರಂಗಿತರಂಗ’ ಖ್ಯಾತಿಯ ನೀರ್ದೇಶಕ ಅನೂಪ್ ಭಂಡಾರಿ ಅವರು ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ಅದ್ದೂರಿಯಾಗಿ ಸಿನಿಮಾ ಮೂಡಿಬಂದಿದ್ದು, ಜಾರ್ ಮಂಜುನಾಥ್ ಹಾಗೂ ಅಲಂಕಾರ್ ಪಾಂಡಿಯನ್ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಟೀಸರ್ ಮೂಲಕ ‘ವಿಕ್ರಾಂತ್ ರೋಣ’ ಸೌಂಡ್ ಮಾಡಿದ್ದು, ಕಿಚ್ಚನ ಗೆಟಪ್ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಸಿನಿಮಾ ನೋಡಲು ಅಭಿಮಾನಿಗಳು ತುದಿಗಾಳಿನಲ್ಲಿ ನಿಂತು ಕಾಯುತ್ತಿದ್ದಾರೆ. ವಿಶೇಷವೆಂದರೆ ಈ ಸಿನಿಮಾ 3ಡಿ ಅವತರಣೆಕೆಯಲ್ಲಿ ಬಿಡುಗಡೆ ಆಗಲಿದೆ. ರಿಲೀಸ್ ಡೀಟ್ ಅನೌನ್ಸ್ ಮಾಡಲು ‘ವಿಕ್ರಾಂತ್ ರೋಣ’ ತಂಡ ಒಂದು ಟೀಸರ್ ಬಿಡುಗಡೆ ಮಾಡಿದೆ. ಕಿಚ್ಚ ಸುದೀಪ್ ಅವರು ಬೈಕ್ ಏರಿ ಖಡಕ್ ಪೋಸ್ ನೀಡಿದ್ದಾರೆ. ದಟ್ಟ ಕಾನನದ ಹಿನ್ನಲೆಯಲ್ಲಿ ಈ ಕಥೆ ಸಾಗಲಿದೆ ಎಂಬುದನ್ನು ಈ ಟೀಸರ್ ಸಾರು ಹೇಳಿತ್ತಿದೆ. ‘2022 ರ ಫೆ.24’ ರಂದು ಜಗತ್ತಿಗೆ ಹೊಸ ಹೀರೋ ಸಿಗಲಿದ್ದಾನೆ ಎಂಬ ಕ್ಯಾಪ್ಷನ್ ಎಲ್ಲರ ಗಮನ ಸೆಳೆಯುತ್ತಿದೆ. (ಎಸ್.ಎಂ, ಎಸ್.ಹೆಚ್)

Leave a Reply

comments

Related Articles

error: