ದೇಶಪ್ರಮುಖ ಸುದ್ದಿ

ನಿಮ್ಮನ್ನು ನೀವು ಬದಲಿಸಿಕೊಳ್ಳಿ, ಇಲ್ಲದಿದ್ದರೆ ಒಂದಷ್ಟು ಬದಲಾವಣೆ ಅದಾಗೇ ಆಗುತ್ತದೆ : ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ಎಚ್ಚರಿಕೆ

ದೇಶ(ದೆಹಲಿ),ಡಿ.07 : ಸದ್ಯ ಸಂಸತ್ತಿನ ಚಳಿಗಾಲ ಅಧಿವೇಶನ ನಡೆಯುತ್ತಿದ್ದು, ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಜೆಪಿ ಸಂಸದರಿಗೆ ಒಂದು ಖಡಕ್ ಎಚ್ಚರಿಕೆಯನ್ನು ನೀಡಿದ್ದಾಗಿ ಮೂಲಗಳು ತಿಳಿಸಿವೆ.

ಇಂದು ಬಿಜೆಪಿ ಸಂಸದೀಯ ಪಕ್ಷದ ಸಭೆ ನಡೆಸಿದ ಅವರು ಸಂಸತ್ತಿಗೆ ಮತ್ತು ಸಭೆಗೆ ಸಂಸದರು ಮತ್ತು ಪ್ರಮುಖ ನಾಯಕರುಗಳು ಗೈರು ಹೆಚ್ಚಾಗುತ್ತಿರುವುದರಿಂದ ‘ನಿಮ್ಮನ್ನು ನೀವು ಬದಲಿಸಿಕೊಳ್ಳದೆ ಇದ್ದರೆ, ಒಂದಷ್ಟು ಬದಲಾವಣೆಗಳು ಅದಾಗೇ ಆಗುತ್ತವೆ’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಇಂದಿನ ಸಭೆಯಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ಎಸ್.ಜೈಶಂಕರ್,ಪಿಯೂಷ್ ಗೋಯಲ್, ಪ್ರಲ್ಹಾದ್ ಜೋಶಿ,ಜಿತೇಂದ್ರ ಸಿಂಗ್ ಮತ್ತು ಅರ್ಜುನ್ ರಾಮ್ ಮೇಘ್ವಾಲ್ ,ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕೂಡ ಇದ್ದರು.(ಎಸ್.ಎಂ, ಎಸ್.ಹೆಚ್)

Leave a Reply

comments

Related Articles

error: