ನಮ್ಮೂರುಮೈಸೂರು

ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಗೆ ಅಭಿನಂದನೆ

ಮೈಸೂರು,ಡಿ.7 : -ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಅವರಿಗೆ  ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿ ವತಿಯಿಂದ ರವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿ ವತಿಯಿಂದ ಜೆ ಎಲ್ ಬಿ ರಸ್ತೆಯಲ್ಲಿ ಇರುವ ದಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ. ನೂತನವಾಗಿ ಆಯ್ಕೆಗೊಂಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ರವರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಕೆ ಪಿ ಸಿ ಸಿ ಕಾರ್ಯಾಧ್ಯಕ್ಷರು ಹಾಗೂ ಮಾಜಿ ಸಂಸದ ಧ್ರುವನಾರಾಯಣ್ ರವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು, ನಂತರ ಮಾತನಾಡಿದ ಅವರು ಸಾಹಿತ್ಯ ಪರಿಷತ್ತು ಒಂದು ಯುವ ಚೇತನ ಬರಹಗಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಕನ್ನಡಪರ ಹೋರಾಟಗಳಲ್ಲಿ ಅತಿಹೆಚ್ಚು ಒತ್ತು ನೀಡಬೇಕು ಮತ್ತು ದೇವರಾಜ್ ಅರಸು ಪ್ರತಿಮೆ ನಿರ್ಮಾಣಕೆ ನನ್ನ ಪೂರ್ಣ ಬೆಂಬಲ ಇದೆ ಎಂದು ನುಡಿದರು ಮುಂದುವರೆದು ಮಾತನಾಡಿದ ಅವರು ಈಗ ಆಯ್ಕೆಯಾಗಿರುವ ನೂತನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ರವರು ಎಲ್ಲರನ್ನು  ಒಗ್ಗೋಡಿಸಿ ಕನ್ನಡ ಹಾಗೂ ಕನ್ನಡದ ಹಿರಿಮೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ  ಕಾರ್ಯಗಳನ್ನು ಮಾಡಲಿ ಎಂದು  ಆಶಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಜಾಕೀರ್ ಹುಸೈನ್, ರಾಜ್ಯ ಪ್ರಧಾನ ಸಂಚಾಲಕರಾದ ಡೈಲಿ ವೆಂಕಟೇಶ್, ವೈ. ಡಿ ರಾಜಣ್ಣ, ರಘುರಾಮ್ ವಾಜಪೇಯಿ, ಶಾಸಕ ತನ್ವೀರ್ ಸೇಠ್, ಕೆ.ಆರ್ ಕ್ಷೇತ್ರದ ಯುವ ಕಾಂಗ್ರೆಸ್ ಮುಖಂಡ ಎನ್.ಎಂ ನವೀನ್ ಕುಮಾರ್, ಚಂದ್ರಶೇಖರ್, ರಿಷಿ ವಿಶ್ವಕರ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.(ಎಸ್.ಎಂ, ಕೆ.ಎಸ್)

Leave a Reply

comments

Related Articles

error: