ನಮ್ಮೂರುಮೈಸೂರು

ಆಟೋ ಮೀಟರ್ ದರವನ್ನು ಹೆಚ್ಚಸುವಂತೆ ಆಟೋ ಚಾಲಕರ ಒಕ್ಕೂಟದ ವತಿಯಿಂದ ಧರಣಿ

ಮೈಸೂರು,ಡಿ.08 : ಮೈಸೂರು ನಗರ ಆಟೋ ಚಾಲಕರ ಒಕ್ಕೂಟದ ವತಿಯಿಂದ ಮೈಸೂರು ನಗರದಲ್ಲಿ ಆಟೋಗಳ ಮೀಟರ್ ಕನಿಷ್ಠ ದರವನ್ನು ರೂ.30/- ಹೆಚ್ಚಿಸಿ ಪ್ರತಿ ಕಿ.ಮೀ ಗೆ 15/- ದರವನ್ನು ನಿಗಧಿ ಪಡಿಸುವಂತೆ ಒತ್ತಾಯಿಸಿ ಧರಣಿಯನ್ನು ನಡೆಸಿದ್ದಾರೆ.

ನೆನ್ನೆ ಅಪರಾಹ್ನ 2.30 ರಲ್ಲಿ ಮೈಸೂರು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಆಟೋ ಚಾಲಕರು ಮೀಟರ್ ದರವನ್ನು ಹೆಚ್ಚಿಸಲು ಧರಣಿಯನ್ನು ನಡೆಸುತ್ತಿದ್ದ ವೇಳೆ, ಸ್ಥಳಕ್ಕೆ ಚಾಮರಾಜ ಕ್ಷೇತ್ರದ ಶ್ರೀ ಎಲ್.ನಾಗೇಂದ್ರ ರವರು ಭೇಟಿ ನೀಡಿ, ಅವರ ಬೇಡಿಕೆಗಳನ್ನು ಆಲಿಸಿದರು.

ಇಂದಿನ ದಿನಗಳಲ್ಲಿ ಹೆಚ್ಚಾಗಿರುವ ಪೆಟ್ರೋಲ್ ಹಾಗೂ ಗ್ಯಾಸ್ ದರವನ್ನು ಮನಗಂಡು ಅವರ ಕೋರಿಕೆಯು ಸತ್ಯಾಸತ್ಯತೆಯಿಂದ ಕೂಡಿರುವುದರಿಂದ  ಅವರ ದೈನಂದಿನ ಜೀವನ ನಿರ್ವಹಣೆಗೆ ತೊಂದರೆಯಾಗಿರುವುದರಿಂದ, ಮೈಸೂರು ಜಿಲ್ಲಾ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗಳಾದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಇವರ ಮನವಿಯನ್ನು ಪರಿಶೀಲಿಸಿ ಕೂಡಲೇ ಕ್ರಮವಹಿಸಲು ಅನುವಾಗುವಂತೆ ನೀತಿ ಸಂಹಿತೆ ಮುಕ್ತಾಯವಾದ ಕೂಡಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಾರಿಗೆ ಪ್ರಾಧಿಕಾರದ ಸಭೆಯನ್ನು ಕರೆದು ವಿಷಯ ಮಂಡಿಸಿ ಸೂಕ್ತ ನ್ಯಾಯ ದೊರಕಿಸಿಕೊಡುವಂತೆ ಸೂಚನೆ ನೀಡಿದ್ದಾರೆ.

ತದನಂತರ ಆಟೋ ಚಾಲಕರು ಮುಷ್ಕರವನ್ನು ಕೈಬಿಟ್ಟು ಅವರ ಕರ್ತವ್ಯಕ್ಕೆ ತೆರಳಿದ್ದಾರೆ. (ಕೆ.ಎಸ್, ಎಸ್.ಎಂ)

Leave a Reply

comments

Related Articles

error: