ನಮ್ಮೂರುಮೈಸೂರು

ವಿಧಾನ ಪರಿಷತ್ ಚುನಾವಣೆ : ಮೈಸೂರು ಜಿಲ್ಲೆಯಲ್ಲಿ ಸಂತೆ ಜಾತ್ರೆಗಳಿಗೆ ನಿಷೇಧ

ಮೈಸೂರು,ಡಿ.8 :  ಸ್ಥಳೀಯ ವಿಧಾನ ಪರಿಷತ್ ಚುನಾವಣೆಗಳು ನಡೆಯುತ್ತಿರುವ  ಅಂಗಾವಾಗಿ ಮೈಸೂರು ಜಿಲ್ಲೆಯಲ್ಲಿ  ನಡೆಯುವ ಸಂತೆ ಜಾತ್ರೆಗಳನ್ನು ನಿಷೇದಿಸುವಂತೆ ಮೈಸೂರು ಜಿಲ್ಲಾಧಿಕಾರಗಳು ನಿರ್ದೇಶನವನ್ನು ಹೊರಡಿಸಿದ್ದಾರೆ.

ಮೈಸೂರಿನಲ್ಲಿ 2021 ಡಿ.10 ರಂದು ನಡೆಯಲಿರುವ ಸ್ಥಳೀಯ ವಿಧಾನ ಪರಿಷತ್ ಚುನಾವಣೆಯ ಮತದಾನವು ಸುಸೂತ್ರವಾಗಿ ನಡೆಯುವ ಸಲುವಾಗಿ ಜಿಲ್ಲೆಯಲ್ಲಿ ನೀತಿ ಸಂಹಿತೆಯನ್ನು ಹೊರಡಿಸಲಾಗಿದ್ದು, ನೀತಿ ಸಂಹಿತೆ ಉಲ್ಲಂಘನೆಯಾಗದ ರೀತಿಯಲ್ಲಿ ನೋಡಿಕೊಳ್ಳಲು , ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್ ಸೆಕ್ಷನ್ 114 ಅಡಿಯಲ್ಲಿ ಮೈಸೂರು ಜಿಲ್ಲೆಯಾದ್ಯಂತ 2021 ಡಿ.9 ರ ಮಧ್ಯ ರಾತ್ರಿ 12 ಗಂಟೆಯಿಂದ ಡಿ.10 ರ ಮಧ್ಯ ರಾತ್ರಿ 12ರವರೆಗೆ ಎಲ್ಲಾ ವಿವಿಧ ಸಂತೆ ಜಾತ್ರೆಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಆದೇಶವನ್ನು ಹೊರಡಿಸಿದ್ದಾರೆ. (ಜಿ.ಕೆ, ಎಸ್.ಎಂ)

Leave a Reply

comments

Related Articles

error: