ಮೈಸೂರು

ಒಬ್ಬರನ್ನೊಬ್ಬರು ನೋಡದ ಈಶ್ವರಪ್ಪ-ಯಡಿಯೂರಪ್ಪ

ಮೈಸೂರು,ಮೇ.6:- ಸಂತೋಷ್ ವಿರುದ್ಧ ಬಿಎಸ್ ವೈ ಬಹಿರಂಗ ಹೇಳಿಕೆ ಹಿನ್ನೆಲೆ  ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ  ಬಿ‌‌.ಎಲ್. ಸಂತೋಷ್  ಕಾರ್ಯಕಾರಿಣಿಯತ್ತ ಸುಳಿಯಲಿಲ್ಲ. ಕಾರ್ಯಕಾರಿಣಿ ಸಭೆಯಲ್ಲಿ ಯಡಿಯೂರಪ್ಪ ಮತ್ತು  ಈಶ್ವರಪ್ಪ ಒಬ್ಬರನ್ನೊಬ್ಬರು ನೋಡದೇ ಕುಳಿತಿದ್ದರು. ಇಬ್ಬರ ಮಧ್ಯದ ಆಸನಗಳಲ್ಲಿ ಅನಂತ್ ಕುಮಾರ್ ಮತ್ತು ಡಿವಿಸದಾನಂದಗೌಡ ಆಸೀನರಾಗಿದ್ದರು. ರಾಜ್ಯ ಬಿಜೆಪಿ ಪ್ರಭಾರಿ ಮುರಳೀಧರ ರಾವ್ ಅವರನ್ನು ಶಾಲು ಹೊದೆಸಿ ಮೈಸೂರು ಪೇಟ ತೊಡಿಸಿ  ಸನ್ಮಾನಿಸಲಾಯಿತು. ಭಿನ್ನಮತದ ಬಿಸಿಯಲ್ಲಿ  ಬಿಜೆಪಿ ಕಾರ್ಯಕಾರಿಣಿ ಆರಂಭವಾಯಿತು. ಈಶ್ವರಪ್ಪ ವೇದಿಕೆಗೆ ಬಂದು ಕೈ ಮುಗಿದರೂ ಯಡಿಯೂರಪ್ಪ ಅತ್ತ ತಿರುಗಿ ನೋಡಲಿಲ್ಲ.

ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಮುರಳೀಧರರಾವ್ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕೌಂಟ್ ಡೌನ್ ಆರಂಭವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಎಸ್ ಯಡಿಯೂರಪ್ಪ ರಾಜ್ಯದ ಸಿಎಂ ಆಗಲಿದ್ದಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರುಳಿಧರ್ ರಾವ್ ಹೇಳಿದರು. ರಾಜ್ಯ ಕಾರ್ಯಕಾರಣಿಯಲ್ಲಿ ತೆಗೆದುಕೊಳ್ಳುವ ತೀರ್ಮಾನ ಮುಂದಿನ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕರುನಾಡಿನ ಜನಬಿಜೆಪಿ ಬೆಂಬಲಿಸಿ ಹೆಚ್ಚು ಸಂಸದರನ್ನು  ಆಯ್ಕೆಮಾಡಿದ್ದಾರೆ ಎಂದರು.  ಸ್ವಚ್ಛ ಭಾರತ ಅಭಿಯಾನವನ್ನು ಬಿಜೆಪಿ ಪ್ರಾರಂಭ ಮಾಡಿತ್ತು. ಮೈಸೂರಿಗೆ ಮೊದಲ ಸ್ಥಾನ ಕೈ ತಪ್ಪಿದಕ್ಕೆ ಇಲ್ಲಿನ ಮೇಯರ್ ಕೇಂದ್ರದ ಮೇಲೆ ದೂರುತ್ತಾರೆ. ಇದು ಸರಿಯಲ್ಲ ಕಳೆದ ಎರಡು ಬಾರಿ ಮೊದಲ ಸ್ಥಾನ ನೀಡಿದ್ದು ಯಾರು?  ಸ್ವಚ್ಛತೆ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು ಮೈಸೂರು ಮೇಯರ್ ಎಂ ಜೆ ರವಿಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು.  (ವರದಿ:ಎಸ್.ಎನ್)

 

Leave a Reply

comments

Related Articles

error: